ಅ.10ರಂದು ನೇರಲಕೆರೆಯಲ್ಲಿ ಜ್ಞಾನಕೇಂದ್ರ ಲೋಕಾರ್ಪಣೆ: ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಎಚ್.ಜಿ.ಗಂಗರಾಜು ಮಾಹಿತಿ

Press Conference on Gnanakendra Lokarpana Mandya
Published on

ಮಂಡ್ಯ: ಬುದ್ಧ ಭಾರತ ಫೌಂಡೇಷನ್ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ಗೌತಮ ಬುದ್ದರ ಧಮ್ಮ ಧ್ಯಾನ ಮತ್ತು ಜ್ಞಾನಕೇಂದ್ರವನ್ನು ಅ.10ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಎಚ್.ಜಿ.ಗಂಗರಾಜು ತಿಳಿಸಿದರು.

ಅಸಮಾನತೆ ತೊಡೆದು ಹಾಕಲು, ಮುಂದಿನ ಪೀಳಿಗೆಗೆ ವೈಚಾರಿಕ ತಿಳಿವಳಿಕೆ ಮೂಡಿಸಿ ಸಮಸಮಾಜ ನಿರ್ಮಿಸುವ ಉದ್ದೇಶದಿಂದ ಕೇಂದ್ರ ಆರಂಭಿಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ, 100 ಜನ ಬೌದ್ಧ ಉಪಾಸಕರು ಮತ್ತು ಚಿಂತಕರು ಉಳಿಯಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ ವೇಳೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪಾಠದ ವ್ಯವಸ್ಥೆ, ಕಂಪ್ಯೂಟರ್ ತರಬೇತಿ, ಇಂಗ್ಲಿಷ್ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ದಸಂಸ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಅಮ್ಜದ್ ಪಾಷಾ, ಗಾಮನಹಳ್ಳಿ ಸ್ವಾಮಿ, ಮಹೇಶ್, ಶಿವಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net