ಅ.12ರಂದು ಕೆರಗೋಡಿನಲ್ಲಿ ಗಣಪತಿ ವಿಸರ್ಜನೆ: ಬಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಮಾಹಿತಿ

Press conference on Ganpati immersion Mandya
Published on

ಮಂಡ್ಯ: ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಅ.12ರಂದು ನಡೆಯಲಿರುವ ಗಣಪತಿ ಮೂರ್ತಿ ವಿಸರ್ಜನೆ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸುತ್ತಿದ್ದು, ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಗುವುದು ಎಂದು ಬಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು.

ಕೆರಗೋಡು ಗ್ರಾಮದಲ್ಲಿ 5ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆಗೆ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಗವಹಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಮದ್ದೂರು ನಿಡಘಟ್ಟದಿಂದ ಅವರನ್ನು ಬರಮಾಡಿಕೊಂಡು ಸಂಜೆ 5ಗಂಟೆಗೆ ಮಂಡ್ಯ ನಗರದ ಕಾಳಿಕಾಂಭ ದೇವಸ್ಥಾನದಿಂದ ಕೆರೆಗೋಡು ಗ್ರಾಮದವರೆಗೆ 1000 ಬೈಕ್, 100 ಕಾರುಗಳ ಮೂಲಕ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂಡಲಬಾಗಿಲು ಹನುಮ ಮಾಲಾ ಸಮಿತಿ ಜಿಲ್ಲಾಧ್ಯಕ್ಷ ರಾಜುಸ್ವಾಮಿ, ಚೇತನ್‌ಕುಮಾರ್, ಮಲ್ಲಿಕಾರ್ಜುನ್, ಸೃಜನ್, ಬಜರಂಗ ಸೇನೆಯ ಹರ್ಷ, ವಿನೋದ್, ಬಿ.ಹರ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net