

ಮಂಡ್ಯ: ಸರ್ ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗ ಮತ್ತು ಕಲ್ಮಂಟಿದೊಡ್ಡಿ ಸಹಯೋಗದೊಡನೆ ಏ.10ರಿಂದ 13ರವರೆಗೆ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಏಪ್ರಿಲ್ 10ರಿಂದ 13ರವರೆಗೆ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕಲ್ಮಂಟಿದೊಡ್ಡಿ ಗ್ರಾಮಸ್ತ ಸುರೇಂದ್ರ ಕುಮಾರ್ ತಿಳಿಸಿದರು.
ಪಂದ್ಯಾವಳಿಯಲ್ಲಿ 10 ತಂಡ ಭಾಗವಹಿಸಲಿದ್ದು, ಎರಡು ಗುಂಪುಗಳಾಗಿ ವಿಂಗಡನೆಗೊಂಡು ಲೀಗ್ ಹಂತದಲ್ಲಿ ಪಂದ್ಯಾವಳಿ ನಡೆಯಲಿವೆ. ಕೊಪ್ಪ, ಕೆರಗೋಡು, ಬಸರಾಳು ಹೋಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಟಗಾರರು, ಮಂಡ್ಯ ಗ್ರಾಮಾಂತರ ಪ್ರದೇಶದ ಸಾತನೂರು, ಕೊಮ್ಮೇರಹಳ್ಳಿ, ಚಿಕ್ಕಮಂಡ್ಯ, ಹೊನಗಾನಹಳ್ಳಿ ಮತ್ತು ಗೋಪಾಲಪುರ ಗ್ರಾಮಗಳ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಗ್ರಾಮದ ಚೇತನ್, ಆನಂದ್, ಮಧು ಇದ್ದರು.