

ಮಂಡ್ಯ: ಭಾರತ ಸರ್ಕಾರದ ‘‘ಅಸ್ಮಿತ’’ ಯೋಜನೆಯಡಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಬಾಲಕಿಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಸೆ.13 ಮತ್ತು 14ರಂದು ನಡೆಸಲಾಗುವುದು ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಎಚ್.ಅನಿಲ್‌ಕುಮಾರ್ ತಿಳಿಸಿದರು.
ಖೇಲೋ ಇಂಡಿಯಾ ಕಾರ್ಯಕ್ರಮದ ಭಾಗವಾಗಿ 15, 17 ಮತ್ತು 19 ವರ್ಷದೊಳಗಿನ ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿ ನಗರದ ಪಿಇಟಿ ಇಂಜಿನಿಯರಿಂಗ್ ಕಾಲೇಜಿನ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಂದ್ಯಾವಳಿಯಲ್ಲಿ ಭಾಗವಹಿಸುವವರು ಸೆ.10ರೊಳಗೆ ವಿದ್ಯಾರ್ಥಿ ಅಥವಾ ಸರ್ಕಾರಿ ಗುರುತಿನ ಚೀಟಿಯೊಂದಿಗೆ ನೋಂದಾಯಿಸಿಕೊಳ್ಳಬೇಕು. ಪ್ರವೇಶ ಉಚಿತವಾಗಿದ್ದು, ಮೊ.ಸಂ 9886013288 ಕರೆ ಮಾಡಿ ಅಥವಾ ವಾಟ್ಸ್‌ಆಪ್ ಸಂದೇಶದ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಆಟಗಾರರು ಕ್ರೀಡಾ ಉಡುಪು, ನಾನ್ ಮಾರ್ಕಿಂಗ್ ಶೂಗಳ ಮತ್ತು ತಮ್ಮ ಸ್ವಂತ ರಾಕೆಟ್‌ಗಳನ್ನು ತರಬೇಕು. ಪಂದ್ಯಾವಳಿಯಲ್ಲಿ 80ಕ್ಕೂ ಹೆಚ್ಚು ಆಟಗಾರ್ತಿಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಮನೋಹರ್ ಇದ್ದರು.