11ರಂದು ಆದಿಚುಂಚನಗಿರಿ ವಿವಿ ಘಟಿಕೋತ್ಸವ: ಉಪ ಕುಲಪತಿ ಡಾ.ಎಂ.ಎ.ಶೇಖರ್ ಮಾಹಿತಿ

Press Conference on Adichuchanagiri University Convocation Mandya
Published on

ಮಂಡ್ಯ: ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ನಾಲ್ಕನೇ ವರ್ಷದ ಘಟಿಕೋತ್ಸವ ಜೂ.11ರಂದು ಬೆಳಗ್ಗೆ 10.30 ಗಂಟೆಗೆ ವಿವಿಯ ಆವರಣದಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉಪ ಕುಲಪತಿ ಡಾ.ಎಂ.ಎ.ಶೇಖರ್ ಹೇಳಿದರು.

ಘಟಿಕೋತ್ಸವ ವಿವಿಯ ಕುಲಪತಿ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೌದ್ಧಿಕ ಸಂಶೋಧನಾ ಪ್ರಯೋಗಾಲಯದ ನಿರ್ವಹಣಾ ಮಂಡಳಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇನ್ನು ಈ ಘಟಿಕೋತ್ಸವದಲ್ಲಿ ವಿವಿಯ 17 ವಿಭಾಗದ 1,265 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ನೀಡಲಾಗುವುದು. ಈ ಪೈಕಿ 570 ವಿದ್ಯಾರ್ಥಿ ಹಾಗೂ 695 ವಿದ್ಯಾರ್ಥಿನಿಯರಾಗಿದ್ದಾರೆ. ಅಂತೆಯೇ ಐವರು ಅಭ್ಯರ್ಥಿಗಳಿಗೆ ಪಿ.ಎಚ್‌ಡಿ ಪದವಿ ನೀಡಲಾಗುವುದು. ಇದಲ್ಲದೆ ಇದೇ ಸಂದರ್ಭದಲ್ಲಿ ವೈದಕೀಯ ಕಾಲೇಜಿನ ಮೊದಲ ಬ್ಯಾಚ್‌ನ 131 ಅಭ್ಯರ್ಥಿಗಳು ಪದವಿ ಪಡೆಯಲಿದ್ದಾರೆ ಎಂದು ವಿವರಿಸಿದರು.

ರಿಜಿಸ್ಟರ್ ಡಾ.ಸಿ.ಕೆ.ಸುಬ್ಬರಾಯ, ಡಾ.ಪ್ರಾಣೇಶ್ ಗುರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net