ಜು.16ರಂದು ಮೀಡಿಯಾ ಅವಾಂತರ ಕೃತಿ ಬಿಡುಗಡೆ: ಚಿರಂತ ಪ್ರಕಾಶನದ ಮುಖ್ಯಸ್ಥ ಕೆ.ಶಂಭು ಮಾಹಿತಿ

Tulasi
Published on

ಮಂಡ್ಯ: ಚಿರಂತ ಪ್ರಕಾಶನ ಹೊರತಂದಿರುವ "ಮೀಡಿಯಾ ಅವಾಂತರಗಳು" ಕೃತಿ ಬಿಡುಗಡೆ ಸಮಾರಂಭವು ನಗರದಲ್ಲಿ ಜು.16ರಂದು ನಡೆಯಲಿದೆ ಎಂದು ಪ್ರಕಾಶನದ ಮುಖ್ಯಸ್ಥ ಕೆ.ಶಂಭು ತಿಳಿಸಿದರು.

ಬರಹಗಾರ್ತಿ, ಸಾಹಿತಿಯಾಗಿರುವ ಡಾ.ಪಿ.ಸುಮಾರಾಣಿ ಶಂಭು ಅವರು "ಮೀಡಿಯಾ ಅವಾಂತರಗಳು" ಕೃತಿಯನ್ನು ರಚಿಸಿದ್ದಾರೆ. ನಗರದ ಗಾಂಧಿಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಚಿತ್ರನಟ ಮಂಡ್ಯ ರಮೇಶ್ ಕೃತಿಯನ್ನು ಬಿಡುಗಡೆ ಮಾಡುವರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಅವರು ಕೃತಿ ಕುರಿತು ಮಾತನಾಡುವರು. ಎಸ್‌ಬಿಇಟಿ ಸಮೂಹ ಸಂಸ್ಥೆಗಳ ಕರ‍್ಯದರ್ಶಿ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು. ಗೋಷ್ಠಿಯಲ್ಲಿ ಬರಹಗಾರ್ತಿ ಡಾ.ಸುಮಾರಾಣಿ ಶಂಭು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net