10 ದಿನದೊಳಗೆ ಹಲ್ಲೇಗೆರೆ ರಸ್ತೆ ಬಗೆಹರಿಸಿ: ರಾಜ್ಯ ಸಂಚಾಲಕ ಎಚ್.ಸಿ.ಶಿವರಾಮು ಒತ್ತಾಯ

Press conference demanding to resolve road problem Mandya
Published on

ಮಂಡ್ಯ: ಹದಿಮೂರು ವರ್ಷದಿಂದ ನನೆಗುದಿಗೆ ಬಿದ್ದಿರುವ ತಾಲೂಕಿನ ಹಲ್ಲೇಗೆರೆ ಗ್ರಾಮದ ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕೆಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆ ರಾಜ್ಯ ಸಂಚಾಲಕ ಎಚ್.ಸಿ.ಶಿವರಾಮು ಆಗ್ರಹಿಸಿದರು.

ರಸ್ತೆ ಸಮಸ್ಯೆ ಹಿನ್ನೆಲೆಯಲ್ಲಿ ಸೆ.3ರಂದು ಶಾಸಕ ರವಿಕುಮಾರ್ ಗಣಿಗ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಅಂತೆಯೇ 20 ದಿನದೊಳಗೆ ಬಗೆಹರಿಸಿಕೊಡುವುದಾಗಿ ತಿಳಿಸಿದ್ದರು. ಆದರೆ ಒಪ್ಪಿಕೊಂಡಿದ್ದ ಅವಧಿ ಮುಗಿದಿದೆ. ಇನ್ನು 10 ದಿನದಲ್ಲಾದರೂ ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ನೈಜ ರೈತರಿಗೆ ಸೂಕ್ತ ಪರಿಹಾರ ಕೊಟ್ಟು ಕಾಮಗಾರಿ ಪೂರ್ಣಗೊಳಿಸಿ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇನ್ನು ಅಕ್ಟೋಬರ್ ಎರಡನೇ ವಾರದಲ್ಲಿ ಗ್ರಾಮದ ಸಂವಿಧಾನ ಜಾಗೃತಿ ಕೇಂದ್ರದ ಕಚೇರಿ ಸಮೀಪ ಡಾ.ಬಿ.ಆರ್.ಅಂಬೇಡ್ಕರ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ ಸೇರಿದಂತೆ ಶೋಷಿತ ವರ್ಗದ ಪರವಾಗಿ ದುಡಿದ ಮಹಾನೀಯರ ಪುತ್ಥಳಿ ಸ್ಥಾಪಿಸಲಾಗುವುದು. ಇದಕ್ಕೆ 20 ಲಕ್ಷ ರೂ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. ಆರ್ಥಿಕ ನೆರವು ನೀಡುವವರು ವೇದಿಕೆಯನ್ನು ಸಂಪರ್ಕಿಸಬಹುದೆಂದು ಮನವಿ ಮಾಡಿದರು.

ರೈತ ಸಂಘದ ಪಿ.ಕೆ.ನಾಗಣ್ಣ, ಪಣಕನಹಳ್ಳಿ ದೊರೆಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net