ಪರಿಸರ ವಿರೋಧಿ ಕಡತಕ್ಕೆ ಕೇಂದ್ರ ಸಚಿವ ಎಚ್‌ಡಿಕೆ ಸಹಿ: ಕಾಂಗ್ರೆಸ್ ಮುಖಂಡ ಶಿವನಂಜು ಟೀಕೆ

Press conference against Union Minister HDK Mandya
Published on

ಮಂಡ್ಯ: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ಮಾಮಿ ಅವರು ಪರಿಸರಕ್ಕೆ ಮಾರಕವಾಗಬಹುದಾದ ಕಡತಕ್ಕೆ ಸಹಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಆರೋಪಿಸಿದರು.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸ್ವಾಮಿಮಲೈ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದೆ. ಅತ್ಯಂತ ಸೂಕ್ಷ್ಮಜೀವಿ, ಪ್ರಾಣಿ ಮತ್ತು ಸಸ್ಯ ಸಂಕುಲಗಳು ಇರುವ ಅಭಯಾರಣ್ಯ ಪ್ರದೇಶವಾಗಿದೆ. ಇಂತಹ ಪರಿಸರದಲ್ಲಿ 485.77 ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಎಚ್‌ಡಿಕೆ ಅನುಮತಿ ನೀಡಿರುವುದನ್ನು ಖಂಡಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದರೆ 99,388 ಬೃಹತ್ ಮರ, ಜೀವ ಸಂಕುಲ ಹಾಗೂ ಔಷಧ ಸಸ್ಯಗಳ ಮಾರಣ ಹೋಮವಾಗಲಿದೆ. ಅಂತರ್ಜಲ ಹಾಗೂ ಭೂ ಕುಸಿತಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯ ಶ್ರೀಧರ್, ಸೋಮು ಸ್ವರ್ಣಸಂದ್ರ, ಶಿವಣ್ಣ, ನಾಗರತ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net