ಕಾರ್ಖಾನೆ ಆಸ್ತಿ ಸ್ವಂತ ಮಾಡಿಕೊಳ್ಳಲು ಹುನ್ನಾರ: ರೈತ ಮತ್ತು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಚಂದನ್ ಆರೋಪ

Press conference against Nirani organization Mandya
Published on

ಮಂಡ್ಯ: ನಿರಾಣಿ ಸಂಸ್ಥೆ ಪಿಎಸ್‌ಎಸ್ ಕಾರ್ಖಾನೆಯ ಆಸ್ತಿಯನ್ನು ಸ್ವಂತ ಮಾಡಿಕೊಳ್ಳುವ ಹುನ್ನಾರ ಮಾಡಿದೆ ಎಂದು ಎಂದು ಶ್ರೀರಂಗಪಟ್ಟಣ ತಾಲೂಕು ರೈತ ಮತ್ತು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಸದಸ್ಯ ಚಂದನ್ ಆರೋಪಿಸಿದರು.

ಕಾರ್ಖಾನೆಯನ್ನು ಉತ್ತಮ ರೀತಿಯಲ್ಲಿ ನಡೆಸಿಲ್ಲ. ಯಾವುದೇ ಸಮಿತಿ ರಚನೆಯಾಗದೆ, ವಾರ್ಷಿಕ ಮಹಾಸಭೆಯನ್ನೂ ಮಾಡದೇ ತಮ್ಮ ಗುತ್ತಿಗೆಯ ಕರಾರಿನಲ್ಲಿ ಕಾರ್ಖಾನೆಯ ಸ್ಥಿರಾಸ್ತಿ ಹಾಗೂ ಚರಾಸ್ತಿಯನ್ನು ಅಕ್ರಮವಾಗಿ ಸೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ವಕೀಲ ಬಾಲರಾಜ್, ಸತೀಶ್, ಪಿ.ರಘು, ಮಧು, ಪುಟ್ಟಮಾದೇಗೌಡ, ಆನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net