ಸೋಮನಹಳ್ಳಿ ಕೆರೆ ಹಿನ್ನೀರಿನ ಭಾಗ ಒತ್ತುವರಿ: ಗ್ರಾಮಸ್ಥ ಎಸ್.ಪ್ರಕಾಶ್ ಆರೋಪ

Press conference against encroachment Mandya
Published on

ಮಂಡ್ಯ: ಮದ್ದೂರು ತಾಲೂಕು ಸೋಮನಹಳ್ಳಿ ಗ್ರಾಮದ ಕೆರೆಯ ಹಿನ್ನೀರಿನ ಭಾಗದಲ್ಲಿ ಒತ್ತುವರಿ ತೆರವುಗೊಳಿಸಿ ಟ್ರಂಚ್ ಮಾಡಲಾಗಿತ್ತು. ಆದರೆ ಆ ಸ್ಥಳವನ್ನು ಮತ್ತೆ ಒತ್ತುವರಿ ಮಾಡಿಕೊಂಡು ರಸ್ತೆಗೆ ತಂತಿ ಬೇಲಿ ಹಾಕಿರುವುದನ್ನು ತೆರವುಗೊಳಿಸುವಂತೆ ಗ್ರಾಮಸ್ಥ ಎಸ್.ಪ್ರಕಾಶ್ ಒತ್ತಾಯಿಸಿದರು.

ಹಿಂದೆ ತಾಲೂಕು ಆಡಳಿತದಿಂದ ಒತ್ತುವರಿ ತೆರವುಗೊಳಿಸಿ ಕೆರೆ ಸುತ್ತಲೂ ಟ್ರಂಚ್ ಹಾಕಿಸಲಾಗಿತ್ತು. ಆದರೀಗ ಎರಡು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಟ್ರಂಚ್ ಹಾಗೂ ಓಡಾಡುವ ರಸ್ತೆಗೆ ತಂತಿಬೇಲಿ ಹಾಕಿ ಉಪಟಳ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಗ್ರಾಮಸ್ಥರಾದ ಎಸ್.ಎಚ್.ರಮೇಶ್, ಮಹದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net