ನವೋದಯ ಶಾಲೆಯಲ್ಲಿ ಪತ್ರಿಕೋದ್ಯಮ ಕಾರ್ಯಗಾರ

press
Published on

ಮಡಿಕೇರಿ:

ವಿದ್ಯಾರ್ಥಿಗಳು ಸೂಕ್ತವಾದ ಸಮಯದಲ್ಲಿ ಭವಿಷ್ಯ ರೂಪಿಸಲು ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು. ಮಡಿಕೇರಿಯ ಪಿಎಂ ಶ್ರೀ ನವೋದಯ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕೋದ್ಯಮದ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಮಯ ತುಂಬಾ ಅಮೂಲ್ಯವಾಗಿದ್ದು, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಆ ಆಯ್ಕೆ ಬೇರೆಯವರ ಪಾಲಾಗಬಹುದು. ಒಬ್ಬ ಪತ್ರಕರ್ತ ಸಮಾಜಕ್ಕೆ ಎಷ್ಟು ಅಗತ್ಯ ಮತ್ತು ಪತ್ರಕರ್ತರ ಜವಾಬ್ದಾರಿಗಳೊಂದಿಗೆ ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದರು.

ಕೊಡಗು ಚಾನಲ್ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ರವಿಕುಮಾರ್ ಮಾತನಾಡಿ, ದೃಶ್ಯ ಮಾಧ್ಯಮ ಎಂದರೆ ಏನು, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ, ದೃಶ್ಯ ಮಾಧ್ಯಮ ಯುವ ಜನತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದರು. ಮಕ್ಕಳು ಪ್ರತೀ ದಿನ ಪತ್ರಿಕೆಗಳು, ಸುದ್ದಿ ವಾಹಿನಿಗಳ ಬಗ್ಗೆ ಗಮನ ಹರಿಸಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಮನೋಸ್ಥೆöÊರ್ಯವನ್ನು ಹೇಗೆ ಬಲಪಡಿಸಿಕೊಳ್ಳಬೇಕೆಂಬುದನ್ನು ಮತ್ತು ಎಲ್ಲರೊಂದಿಗೆ ಪ್ರೀತಿಯಿಂದ ಹೇಗೆ ಬದುಕಬೇಕೆಂಬುದನ್ನು ವಿವರಿಸಿದರು.

ನವೋದಯ ವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ಸುಧಾಮಣಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಾಪಕ ಮಾರುತಿ ದಾಸಣ್ಣವರ,ಇಂಗ್ಲಿಷ್ ಅಧ್ಯಾಪಕಿ ಹೀತಾ ಶ್ರೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net