ಮೈಸೂರು ಅರಮನೆಗೆ ರಾಷ್ಟ್ರಪತಿ ಭೇಟಿ : ಯದುವೀರ್ ಹೇಳಿದ್ದೇನು?

Yaduveer
Published on

ಮೈಸೂರು: ಅಂಬಾವಿಲಾಸ ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸುವ ಕುರಿತು ಪ್ರಮೋದಾದೇವಿ ಒಡೆಯರ್ ತೀಮಾ ನರ್ ಕೈಗೊಳ್ಳುತ್ತಾರೆ ಎಂದು ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಅವರು ಅರಮನೆಗೆ ಆಗಮಿಸುತ್ತಿರುವ ವಿಚಾರ ಇನ್ನು ಅಂತಿಮವಾಗಿಲ್ಲ. ಅವರು ದಸರಾ ಉದ್ಘಾಟನೆಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ದಸರಾ ನಡೆಸಲು ಸಾಧ್ಯವಾಗಿರಲಿಲ್ಲ. ಜಂಬೂಸವಾರಿ ಅರಮನೆ ಆವರಣಕ್ಕೆ ಸೀಮಿತವಾ ಗಿತ್ತು. ಆದರೆ, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಈ ಸಂಭ್ರಮದಲ್ಲಿ ಎಲ್ಲರು ಭಾಗಿಯಾಗಬೇಕು. ಅರಮನೆಯಲ್ಲಿ ಎಂದಿನಂತೆ ಸಂಪ್ರದಾಯಿಕವಾಗಿ ನವರಾತ್ರಿ ಉತ್ಸವವನ್ನು ಆಚರಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net