ಚಿಕ್ಕಬೆಣಕಲ್, ಇಂದರಗಿ ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ

GP ELECTION
ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶಿವಮೂರ್ತಿ ಗೊಲ್ಲರ್, ಉಪಾಧ್ಯಕ್ಷೆಯಾಗಿ ಗುರಮ್ಮ ಲಿಂಗಪ್ಪ ಭೋವಿ ಅವಿರೋಧ ಆಯ್ಕೆಯಾದರು. ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿಯಿದ್ದರು. ಗಂಗಾವತಿ ತಾಲೂಕಿನ ಗಡಿಭಾಗ ಗಂಗಾವತಿ ವಿಧಾನಸಭೆ ಕ್ಷೇತ್ರದ ಇಂದರಗಿ ಗ್ರಾಪಂ ಅಧ್ಯಕ್ಷೆಯಾಗಿ ವರದಮ್ಮ ಎನ್.ಎಮ್ಮಿ, ಉಪಾಧ್ಯಕ್ಷರಾಗಿ ಅಮರೇಶ ಅವಿರೋಧ ಆಯ್ಕೆಯಾದರು. ಗ್ರಾಪಂ ಸದಸ್ಯರು ಮತ್ತು ಮುಖಂಡರಿದ್ದರು.
Published on

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶಿವಮೂರ್ತಿ ಗೊಲ್ಲರ್, ಉಪಾಧ್ಯಕ್ಷೆಯಾಗಿ ಗುರಮ್ಮ ಲಿಂಗಪ್ಪ ಭೋವಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರ ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಮಹಾಂತಗೌಡ ಪಾಟೀಲ್ ಅವಿರೋಧ ಆಯ್ಕೆ ೋಷಿಸಿದರು. ಪಿಡಿಒ ಸುರೇಶ ಉಪ್ಪಾರ್, ಕಾರ್ಯದರ್ಶಿ ಯಮನೂರಪ್ಪ, ವಿಷಯ ನಿರ್ವಾಹಕ ಭೀಮಪ್ಪ ನಾಯಕ, ಸಂತೋಷ ಸೇರಿ ಗ್ರಾಪಂನ 24 ಸದಸ್ಯರು ಭಾಗವಹಿಸಿದ್ದರು.

ಇಂದರಗಿ: ತಾಲೂಕಿನ ಗಡಿಭಾಗ ಗಂಗಾವತಿ ವಿಧಾನಸಭೆ ಕ್ಷೇತ್ರದ ಇಂದರಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಯಿತು. ಎರಡನೇ ಅವಧಿಗೆ ವರದಮ್ಮ ಎನ್.ಎಮ್ಮಿ (ಅಧ್ಯಕ್ಷೆ), ಅಮರೇಶ ಕೊಪ್ಪಳ (ಉಪಾಧ್ಯಕ್ಷ) ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಶರಣಬಸವ ೋಷಿಸಿದರು. ಗ್ರಾಪಂನ 14 ಸದಸ್ಯರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಅವಿರೋಧ ಆಯ್ಕೆಗೆ ಕೆಆರ್‌ಪಿಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net