ಮರವಂತೆ ಬಡಾಕೆರೆ ಸಹಕಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ

badakere
ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗದೀಶ್ ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಶೆಟ್ಟಿ ಉಪ್ಪಳ್ಳಿ ಆಯ್ಕೆಯಾದರು.
Published on

ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗದೀಶ್ ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ಶೆಟ್ಟಿ ಉಪ್ಪಳ್ಳಿ ಆಯ್ಕೆಯಾಗಿದ್ದಾರೆ.

ಹಕ್ಕಾಡಿ ಜಗದೀಶ್ ಪೂಜಾರಿ ಮಾತನಾಡಿ, 13 ಜನರ ನಮ್ಮ ತಂಡದ ಮೇಲೆ ನಂಬಿಕೆ ಇರಿಸಿ ಸಂಘದ ಸದಸ್ಯರು ಆಯ್ಕೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ ಭರವಸೆಯಂತೆ ಕೃಷಿ ಸಾಲ ತಕ್ಷಣ ನೀಡುವ ವ್ಯವಸ್ಥೆ, ನಾವುಂದ ಅರೆಹೊಳೆ ಗಣೇಶನಗರದ ಮಧ್ಯಭಾಗದಲ್ಲಿ ರೇಷನ್ ವಿತರಿಸುವ ಕೇಂದ್ರ ಸ್ಥಾಪಿಸುವ ವ್ಯವಸ್ಥೆ ಸೇರಿದಂತೆ ಇನ್ನಿತರ ಭರವಸೆ ಮುಂದಿನ ಐದು ವರ್ಷದಲ್ಲಿ ಮಾಡಲಾಗುವುದು. ಸಂಘದ ವ್ಯಾಪ್ತಿಗೆ ಒಳಪಡುವ ನಾಲ್ಕು ಗ್ರಾಮದ ರೈತಾಪಿ ಮತ್ತು ಹೈನುಗಾರರಿಗೂ ಸಂಘದ ವತಿಯಿಂದ ಮಾಹಿತಿ, ತರಬೇತಿ ಶಿಬಿರಗಳ ಮೂಲಕ ಸಹಕಾರ ನೀಡುವುದರೊಂದಿಗೆ ಎಲ್ಲರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಂಡು ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು ಎಂದರು.

ಚುನಾವಣಾ ಅಧಿಕಾರಿ ಸುನೀಲ್ ಕುಮಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು, ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ ಸಹಕರಿಸಿದರು. ನಿರ್ದೇಶಕರಾದ ನರಸಿಂಹ ದೇವಾಡಿಗ, ಶ್ರೀನಿವಾಸ ಪೂಜಾರಿ, ಗಣೇಶ ಪೂಜಾರಿ, ಪ್ರಭಾಕರ ಎಂ.ಖಾರ್ವಿ, ಹರಿಶ್ಚಂದ್ರ ಆಚಾರ್ಯ, ಲಕ್ಷ್ಮೀ, ಶಕುಂತಳಾ, ಗಣೇಶ ಪೂಜಾರಿ, ವೀರೇಂದ್ರ ಹೆಗ್ಡೆ, ರಾಮ ಕಂತಿಹೊಂಡ, ಸುರೇಶ್ ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net