ಫೆ.5ರೊಳಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಗ್ರಾಪಂವಾರು ಚುನಾವಣಾ ಅಧಿಕಾರಿಗಳ ನೇಮಿಸಿ ಆದೇಶಿಸಿದ ಡಿಸಿ

Pavankumar Palapati Ballari DC
Published on

ಬಳ್ಳಾರಿ: ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಫೆ.5ರೊಳಗೆ ಪೂರ್ಣಗೊಳ್ಳಲಿದೆ. ಗ್ರಾಪಂವಾರು ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

30 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆಯಲಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ದಿನಾಂಕ ನಿಗದಿಪಡಿಸಿ ಸದಸ್ಯರಿಗೆ ಏಳು ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಹಿಂದುಳಿದ ವರ್ಗ ಎ ಗೆ ಮೀಸಲಾದ ಸ್ಥಾನಕ್ಕೆ ಸಂಬಂಧಪಟ್ಟ ವರ್ಗದವರು ಇಲ್ಲದಿದ್ದಲ್ಲಿ ಹಿಂದುಳಿದ ವರ್ಗ ಬಿ ಹಾಗೂ ಹಿಂದುಳಿದ ವರ್ಗ ಬಿಗೆ ಮೀಸಲಾದ ಸ್ಥಾನಕ್ಕೆ ಸಂಬಂಧಿಸಿದ ಸದಸ್ಯರು ಇಲ್ಲದಿದ್ದರೆ ಹಿಂದುಳಿದ ವರ್ಗ ಎ ಅಭ್ಯರ್ಥಿಯನ್ನು ಪರಿಗಣಿಸಬಹುದು. ನಿಗದಿತ ಪ್ರವರ್ಗದ ಮೀಸಲು ಅಭ್ಯರ್ಥಿಗಳಿದ್ದರೆ ಇತರ ವರ್ಗದವರನ್ನು ಪರಿಗಣಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ತಾಲೂಕಿನ 25 ಗ್ರಾಪಂಗಳಿಗೆ ಆರು ಅಧಿಕಾರಿಗಳನ್ನು ಚುನಾವಣಾ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯ ಎಇಇ ವಿ.ನಾಗದೇವ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಆರ್.ಪಾಲಾಕ್ಷಗೌಡ, ಬಿಇಒ ಸಿದ್ದಲಿಂಗಮೂರ್ತಿ, ತಾಪಂ ಇಒ ಮಡಗಿನ ಬಸಪ್ಪ, ಪಂಚಾಯತ್‌ರಾಜ್ ಇಲಾಖೆಯ ಎಇಇ ಪ್ರಸನ್ನ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಆರ್.ಶ್ರೀನಿವಾಸ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net