ಅಧ್ಯಕ್ಷೆ ಸುಪ್ರಿಯಾ, ಉಪಾಧ್ಯಕ್ಷ ಸಿದ್ದರಾಜು

IMG-20250313-WA0086
Published on

 ಕೆ.ಆರ್.ಸಾಗರ: ಬೆಳಗೊಳ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುಪ್ರಿಯಾ ರವಿಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಸಿದ್ದರಾಜು ಆಯ್ಕೆಯಾದರು.

ಬೆಳಗೊಳ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷಗಾದಿಗೆ ಸುಪ್ರಿಯಾ ಹಾಗೂ ಲಕ್ಷ್ಮೀ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಗಾಧಿಗೆ ಚೌಡೇಗೌಡ ಹಾಗೂ ಸಿದ್ದರಾಜು ನಾಮಪತ್ರ ಸಲ್ಲಿಸಿದರು.

ಸಂಘದಲ್ಲಿ ನೂತನವಾಗಿ ಆಯ್ಕೆಗೊಂಡ 11 ನಿರ್ದೇಶಕರು ಹಾಗೂ ಒಬ್ಬ ಸೂಪ್ರುವೈಸರ್ ಇದ್ದರು. ಚುನಾವಣೆಯಲ್ಲಿ ಸುಪ್ರಿಯಾ ರವಿಕುಮಾರ್ ಹಾಗೂ ಸಿದ್ದರಾಜು ಅವರು ತಲಾ 7 ಮತಗಳು ಪಡೆದು ಆಯ್ಕೆಗೊಂಡರು. ಲಕ್ಷ್ಮೀ ಹಾಗೂ ಚೌಡೇಗೌಡ ಅವರು ತಲಾ 5 ಮತಗಳ ಪಡೆದು ಪರಾಜಿತಗೊಂಡರು. ಚುನಾವಣಾಧಿಕಾರಿ ಅಕ್ರಂ ಪಾಷ ಚುನಾವಣಾ ಕಾರ್ಯ ನಡೆಸಿದರು. ಸಂಘದ ಇಒ ಶಿವಕುಮಾರ್ ಸಹಾಯಕರಾಗಿದ್ದರು. ಸಂಘದ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net