ಪ್ರದೀಪಗೌಡ ಪಾಟೀಲರಿಗೆ ಅಧ್ಯಕ್ಷ ಪಟ್ಟ

22 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಪ್ರದಿಪಗೌಡ ಪಾಟೀಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅವಧಿಗೆ ಅಧ್ಯಕ್ಷರಾಗಿದ್ದ ಗುರುರಾಜ ಹುಣಸಿಮರದ, ಪ್ರದೀಪಗೌಡ ಪಾಟೀಲ ಹಾಗೂ ಸಿದ್ದು ಕಂಬಾರ ಅಧ್ಯಕ್ಷ ಸ್ಥಾನಕ್ಕೆ ಸ್ಪಧಿರ್ಸಿದ್ದರು. ಇದರಲ್ಲಿ ಗುರುರಾಜ ಹುಣಸಿಮರದ ಹಾಗೂ ಪ್ರದೀಪಗೌಡ ಪಾಟೀಲ ಮಧ್ಯೆ ಏರ್ಪಟ್ಟಿದ್ದ ತುರುಸಿನ ಸ್ಪರ್ಧೆಯಲ್ಲಿ ಪ್ರದೀಪಗೌಡ ಜಯಗಳಿಸಿದ್ದಾರೆ.
1 ಅಧ್ಯಕ್ಷ, 20 ಸಾಮಾನ್ಯ ಹಾಗೂ 10 ಮಹಿಳಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಸಲಾಗಿತ್ತು. ಬಳಿಕ ಆರಂಭವಾದ ಮತ ಎಣಿಕೆ ಕಾರ್ಯ ಬೆಳಗಿನ ಜಾವದವರೆಗೆ ನಡೆದಿದ್ದರೂ ಅಧ್ಯಕ್ಷ ಹಾಗೂ ಮಹಿಳಾ ಸ್ಥಾನಗಳ ಫಲಿತಾಂಶ ಮಾತ್ರ ಲಭಿಸಿದೆ. ಉಳಿದ ಸ್ಥಾನಗಳ ಮತ ಎಣಿಕೆ ಕಾರ್ಯ ನಡೆದಿದ್ದು, ಸೋಮವಾರ ತಡರಾತ್ರಿವರೆಗೂ ಸ್ಪಷ್ಟ ಫಲಿತಾಂಶ ಹೊರ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net