ಮಲ್ಲೇಶ್ವರ ಗ್ರಾಮ ಪಂಚಾಯಿತಿಗೆ ಜೋತಿ ಅಧ್ಯಕ್ಷೆ

KDR1 (5)
Published on

ಕಡೂರು: ತಾಲೂಕಿನ ಮಲ್ಲೇಶ್ವರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಕೋಡಿಹಳ್ಳಿ ಗ್ರಾಮದ ಜ್ಯೋತಿಬಾಯಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷೆ ಯಶೋದಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿಬಾಯಿ ಮತ್ತು ಕೆ.ರಾಧ ನಾಮಪತ್ರ ಸಲ್ಲಿಸಿದ್ದರು. ಜ್ಯೋತಿಬಾಯಿ 9 ಮತ ಪಡೆದರೆ ರಾಧ ಕೇವಲ 2 ಮತ ಪಡೆದು ಪರಾಭವಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಎ.ಇ.ಕಲ್ಲಪ್ಪ ಘೋಷಿಸಿದರು. 12 ಸದಸ್ಯ ಬಲದ ಮಲ್ಲೇಶ್ವರ ಗ್ರಾಮ ಪಂಚಾಯಿತಿಯಲ್ಲಿ 11 ಸದಸ್ಯರು ಚುನಾವಣೆಗೆ ಹಾಜರಾಗಿದ್ದರು. ಓರ್ವ ಸದಸ್ಯ ಗೈರಾಗಿದ್ದರು. ಪಿಡಿಒ ವಿನಾಯಕ್, ಕಾರ್ಯದರ್ಶಿ ಅಂಬಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net