

ಚಳ್ಳಕೆರೆ: ತಾಲೂಕು ವಕೀಲರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಕೆ.ಎಂ.ನಾಗರಾಜ್ ಅಧ್ಯಕ್ಷರಾಗಿ ಚುನಾಯಿತರಾದರು. ಉಪಾಧ್ಯಕ್ಷ-ಬಿ.ಪಾಲಯ್ಯ, ಕಾರ್ಯದರ್ಶಿ-ಎಂ.ಎಸ್.ಸಿದ್ದರಾಜು, ಜಂಟಿ ಕಾರ್ಯದರ್ಶಿ-ಎ.ಆರ್.ರಾಮಕೃಷ್ಣ, ಖಜಾಂಚಿ-ಟಿ. ರುದ್ರಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒ.ಹನುಮಂತರಾಯ, ಟಿ.ಬಿ. ಬೋರಯ್ಯ, ದೊರೆ ನಾಗರಾಜ, ಎಸ್.ಒ. ಸಣ್ಣಬೋರನಾಯಕ, ಆರ್.ಪಿ. ತಿಪ್ಪೇಸ್ವಾಮಿ, ಎನ್. ಬೀರಪ್ಪ, ಡಿ.ಬಿ. ಬೋರಯ್ಯ ಆಯ್ಕೆಯಾಗಿದ್ದಾರೆ.