ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಆಯ್ಕೆ

10 Gpt_1
ಗುಂಡ್ಲುಪೇಟೆ ಪಟ್ಟಣದ ಪುರಸಭೆ ನೂತನ ಪದಾಧಿಕಾರಿಗಳನ್ನು ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹಾಗೂ ಸಂಸದ ಸುನಿಲ್ ಬೋಸ್ ಅಭಿನಂದಿಸಿದರು. ಮಧುಸೂದನ್, ಅಣ್ಣಯ್ಯಸ್ವಾಮಿ ಸೇರಿ ಇತರರಿದ್ದರು.
Published on

ಗುಂಡ್ಲುಪೇಟೆ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸೋಮವಾರ ಅವಿರೋಧವಾಗಿ ನಡೆಯಿತು. ಕಾಂಗ್ರೆಸ್‌ನ ಕಿರಣ ಹಾಗೂ ಹೀನಾ ಕೌಸರ್ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಮಧುಸೂದನ್ ಹಾಗೂ ಅಣ್ಣಯ್ಯಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಟಿ.ರಮೇಶ್ ಬಾಬು ಪ್ರಕಟಿಸಿದರು.

ಪಕ್ಷಾಂತರಿ ಸದಸ್ಯರ ಅನರ್ಹತೆ: 23 ಸದಸ್ಯರ ಆಡಳಿತ ಮಂಡಳಿಯಲ್ಲಿ 12 ಸ್ಥಾನಗಳಿಸಿದ ಬಿಜೆಪಿ ಆಡಳಿತ ನಡೆಸಿತ್ತು. ಪಿ.ಗಿರೀಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಸೇರಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಜೆಪಿಯ ಕಿರಣ ಹಾಗೂ ಹೀನಾ ಕೌಸರ್, ಸದಸ್ಯರಾದ ರಮೇಶ್, ರಾಣಿ ಲಕ್ಷ್ಮೀದೇವಿ ಹಾಗೂ ವೀಣಾ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಜಿಲ್ಲಾಧಿಕಾರಿ ಅನರ್ಹಗೊಳಿಸಿತ್ತು. ಈ ಹಿನ್ನೆಲೆಯಲ್ಲಿ 8 ಸದಸ್ಯರ ಬಲದ ಕಾಂಗ್ರೆಸ್, ಒಂದು ಸ್ವತಂತ್ರ ಹಾಗೂ ಒಬ್ಬ ಎಸ್‌ಡಿಪಿಐ ಸದಸ್ಯರು ಶಾಸಕ ಹಾಗೂ ಸಂಸದರನ್ನು ಸೇರಿ 12 ಮತಗಳನ್ನು ಹೊಂದ್ದರಿಂದ ಅನಾಯಾಸವಾಗಿ ಗದ್ದುಗೆ ಹಿಡಿಯಿತು.

ಮತದಾನದಲ್ಲಿ ಭಾಗವಹಿಸಿದ ನಂತರ ನೂತನ ಪದಾಧಿಕಾರಿಗಳನ್ನು ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹಾಗೂ ಸಂಸದ ಸುನಿಲ್ ಬೋಸ್ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net