ಅಧ್ಯಕ್ಷರಾಗಿ ಎಚ್.ಎಂ. ರಾಜು ಆಯ್ಕೆ

23 mlv 1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; delta:null; module: photo;hw-remosaic: false;touch: (0.21253979, 0.51482135);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
Published on

ಮಂಡ್ಯ: ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ.ರಾಜು, ಉಪಾಧ್ಯಕ್ಷರಾಗಿ ಕೆ.ಸಿದ್ದಮ್ಮ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.


ಗ್ರಾಮದ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ರಾಮಕೃಷ್ಣ ಅವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.


ಎಸ್ಸಿ, ಎಸ್ಟಿ ಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜು ಮಾತನಾಡಿ, ಸರ್ವ ಕೋಮಿನ ಸಮುದಾಯಗಳಿರುವ ನಮ್ಮ ಗ್ರಾಮದಲ್ಲಿ ಸಹಬಾಳ್ವೆಯಿಂದ ಎಲ್ಲರೂ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಡೇರಿ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಎಲ್ಲ ಮುಖಂಡರ ಸಲಹೆಯಂತೆ ಹಾಗೂ ನಿರ್ದೇಶಕರ ಸಹಮತದಿಂದ ಸಮಾನತೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ನಿರ್ದೇಕರಾದ ಹನುಮೇಗೌಡ, ಡಿ ಎಚ್.ವಿರೇಗೌಡ, ಎಚ್.ಎಸ್.ಸಿದ್ದರಾಜು, ಡಿ.ಎನ್. ಮರಿಸ್ವಾಮಿ, ಇಂದ್ರ, ಸಿದ್ದರಾಜು, ಶೋಭಾ, ಎಂ. ಭಾನುಮತಿ, ಕೆಂಪರಾಜು ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ಹನುಮಂತು, ಮಹದೇವು, ಮುದ್ದೇಗೌಡ, ಕಾಂತರಾಜು, ನಾಗರಾಜು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net