

ಸಾಸ್ವೆಹಳ್ಳಿ: ಸಾಂಪ್ರದಾಯಿಕ ಕ್ರೀಡೆ- ಕೃಷಿ ಮತ್ತು ಹಬ್ಬಗಳು ಕಣ್ಮರೆಯಾಗುತ್ತಿವೆ ಇವುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮದಾಗಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಗಿರಿಯಪ್ಪ ಗೌಡ ಹೇಳಿದರು.
ಹೋಬಳಿಯ ಹುಣಸಘಟ್ಟದ ಮಾರಿಕಾಂಬಾ ದೇವಿ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಟ್ಟಿನ ಮಾರಿಹಬ್ಬದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾಂಪ್ರದಾಯಿಕ ಕ್ರೀಡೆಗಳು ದೇಹವನ್ನು ಸದೃಢಗೊಳಿಸಿದರೆ, ಹಬ್ಬಗಳು ಸ್ನೇಹ- ಸಂಬಂಧಗಳನ್ನು ಸದೃಢಗೊಳಿಸುತ್ತದೆ. ಸಾವಯವ ಕೃಷಿಯಿಂದ ರಾಸಾಯನಿಕ ಮುಕ್ತ ಆಹಾರ ಪಡೆಯಬಹುದು. ಹೀಗಾಗಿ ಹಿರಿಯರು ಕ್ರೀಡೆ-ಕೃಷಿ, ಹಬ್ಬಗಳಿಗೆ ಮಹತ್ವ ನೀಡುತ್ತಿದ್ದರು ಎಂದರು.
ಮಾರಿಕಾಂಬ ದೇವಿಯ ಗಣಮಗ ಕೆಂಚಪ್ಪ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರು, ಗ್ರಾಮಸ್ಥರು ಇದ್ದರು.