ಮುಂದಿನ ಪೀಳಿಗೆಗೆ ಗ್ರಾಮೀಣ ಕಲೆ ಉಳಿಸಿ

Preserve rural art for future generations
Published on

ಹಾನಗಲ್ಲ: ಗ್ರಾಮೀಣ ಕಲೆಗಳನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಪರಂಪರೆಯಾಗಿ ಕೊಡುಗೆ ನೀಡಬೇಕಾದ ಕರ್ತವ್ಯ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕರಿಸಬೇಕು ಎಂದು ವಿವಿಧ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಎಸ್.ಎಸ್. ಮೂರಮಟ್ಟಿ ಹೇಳಿದರು.

ತಾಲೂಕಿನ ಕೂಸನೂರು ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಕಲಕೇರಿಯ ಲಕ್ಷಿ ್ಮದೇವಿ ಜಾನಪದ ಕಲಾ ಸಂಘ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿ, ಗ್ರಾಮೀಣ ಕ್ರೀಡೆಗಳು, ಗೀಗಿಪದ, ಸೋಬಾನೆ ಹಾಡುಗಳು ಜನಪದರ ಸೊಗಡಾಗಿವೆ. ಅವುಗಳನ್ನು ಇಂದಿನ ಜನಮಾನಸಕ್ಕೆ ತಲುಪಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದ ಗುರುರಾಜ ಉಪಾಧ್ಯ ಅವರಿಂದ ಸುಗಮ ಸಂಗೀತ ಪ್ರಸ್ತುತಗೊಂಡಿತು. ಫಕೀರಯ್ಯ ಬೆನ್ನೂರಮಠ ಸಾನ್ನಿಧ್ಯ ವಹಿಸಿದ್ದರು. ಶಿವಪ್ಪ ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು. ಎನ್.ಪಿ. ದೊಡ್ಡಮನಿ, ಗ್ರಾಪಂ ಅಧ್ಯಕ್ಷ ವೀರಭದ್ರಗೌಡ ಪಾಟೀಲ, ಜಾನಪದ ಕಲಾ ಸಂಘದ ಅಧ್ಯಕ್ಷ ನಿಂಗಪ್ಪ ಬಡಿಗೇರ, ನಾಗರಾಜ ಪೂಜಾರ, ವಿವಿಧ ಕಲಾವಿದರ ಸಂಘದ ಅಧ್ಯಕ್ಷ ಬಸವರಾಜ ಕೋಳೂರ, ಸಿದ್ದಪ್ಪ ಬ್ಯಾತನಾಳ, ಶಿವಪ್ಪ ಬ್ಯಾತನಾಳ, ಕೃಷ್ಟಾಚಾರ ಉಪಾಧ್ಯ, ದೇವೇಂದ್ರಪ್ಪ ಮಂಟೂರ, ನಿಂಗಪ್ಪ ಬಡಿಗೇರ, ಪ್ರವೀಣ ಸೊಪ್ಪಿನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net