

ಚಿಕ್ಕಮಗಳೂರು: ಇತಿಹಾಸ ಅಧ್ಯಯನಕ್ಕೆ ಸಹಕಾರಿಯಾಗಿರುವ ಆಧಾರಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ತಿಳಿಸಿದರು.
ತಾಲೂಕು ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ತಾಲೂಕಿನ ಮರ್ಲೆ ಗ್ರಾಮದ ಚನ್ನಕೇಶವ ಸಿz್ದೆÃಶ್ವರ ಜೋಡಿ ಆಲಯಗಳ ಆವರಣದಲ್ಲಿ ಆಯೋಜಿಸಿದ್ದ ಶಾಸನಗಳ ಮಹತ್ವ ಮತ್ತು ಶಾಸನ ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತಿಹಾಸವು ನಮಗೆ ನಮ್ಮ ಪೂರ್ವಜರ ಘತಕಾಲದ ಘಟನೆಗಳು, ಅವರ ಜೀವನ ಶೈಲಿ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಆಡಳಿತ ಪದ್ಧತಿ, ಸಂಸ್ಕೃತಿ ಮತ್ತು ಅವರ ಜೀವನದ ಕಾಲ ಘಟ್ಟವನ್ನು ತಿಳಿಸಿಕೊಡುತ್ತದೆ. ಇತಿಹಾಸವನ್ನು ತಿಳಿಯಲು ಶಾಸನಗಳು, ಸ್ಮಾರಕಗಳು, ನಾಣ್ಯಗಳು, ದೇವಾಲಯಗಳು, ಲೋಹಗಳು ಹಾಗೂ ವಿವಿಧ ಉಪಕರಣಗಳು ಸಹಕರಿಸುತ್ತವೆ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದರು.
ಶಾಸನಗಳು ಎಂದರೆ ಬಹುಕಾಲ ಉಳಿಯುವಂಥ ಶಿಲೆ, ಲೋಹ ಮೊದಲಾದವುಗಳ ಮೇಲಿನ ಬರಹ. ಮೂಲತಃ ಶಾಸನ ಎಂಬುದು ದಾನ ಸಂಬAಧವಾದ ರಾಜಾಜ್ಞೆಯಾಗಿದೆ. ಶಾಶ್ವತವಾದ ಯಾವುದೇ ಬಗೆಯ ದಾಖಲೆಗಳೇ ಶಾಸನಗಳು. ಇವುಗಳು ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶಗಳಾಗಿವೆ. ಶಾಸನಗಳು ವಾಸ್ತವ ವಿಷಯಗಳ ದಾಖಲೆಗಳಾದ್ದರಿಂದ ಅವುಗಳಲ್ಲಿ ದೊರಕುವ ವಿಷಯ ಸಂಪತ್ತು ಅಗಾಧವಾದುದು ಎಂದು ಹೇಳಿದರು.
ಶಾಸನಗಳನ್ನು ದೇವಾಲಯಗಳು, ವೀರಗಲ್ಲುಗಳು ಹಾಗೂ ಗೋಡೆಗಳಲ್ಲಿ ರಚಿಸಲಾಗುತಿತ್ತು. ಭೂಮಿಯಲ್ಲಿ ದೊರಕುವ ಯಾವುದೇ ಇತಿಹಾಸ ತಿಳಿಸುವ ಆಧಾರಗಳನ್ನು ಸಂರಕ್ಷಿಸಿ ಇತಿಹಾಸ ಅಧ್ಯಯನಕ್ಕೆ ಹಾಗೂ ಅವುಗಳ ಉಳಿವಿಗಾಗಿ ಕ್ರಮವಹಿಸಬೇಕು. ನಮ್ಮ ಪರಂಪರೆ ನಾಡಿನ ಶ್ರೀಮಂತಿಕೆಯನ್ನು ಮಕ್ಕಳಿಗೆ ತಿಳಿಯಪಡಿಸಲು ಇವುಗಳ ಅವಶ್ಯಕತೆ ಬಹಳಷ್ಟಿದೆ. ಪ್ರತಿಯೊಂದು ಊರುಗಳಲ್ಲಿ ಇತಿಹಾಸ ತಿಳಿಸುವ ಆಧಾರಗಳು ದೊರಕುತ್ತವೆ. ಅವುಗಳನ್ನು ಗುರುತಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅವುಗಳ ಅಧ್ಯಯನ ಮಾಡಲು ಸಹಕರಿಸಿ ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ತಾರನಾಥ್ ಮಾತನಾಡಿ, ಇತಿಹಾಸವು ನಮ್ಮ ಬದುಕಿನ ದಾರಿ ದೀಪ. ಇತಿಹಾಸ ಅಧ್ಯಯನವು ಸಮಯದ ಮೂಲಕ ವಿಷಯಗಳನ್ನು ಸಂಪರ್ಕಿಸುತ್ತವೆ ಮತ್ತು ನಮ್ಮ ಅಸ್ತಿತ್ವದ ಮೂಲಗಳನ್ನು ವಿವರಿಸುತ್ತವೆ. ನಾವು, ನಮ್ಮ ಸಮಾಜ , ಮತ್ತು ನಮ್ಮ ಸಂಸ್ಕೃತಿ ಹೇಗೆ ರೂಪುಗೊಂಡಿದೆ ಎಂಬುದನ್ನು ತಿಳಿಸಿಕೊಡುತ್ತದೆ ಎಂದರು.
ಇತಿಹಾಸ ತಿಳಿಸಿಕೊಡುವ ಆಧಾರಗಳನ್ನು ಸಂರಕ್ಷಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊರಕುವ ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು, ವೀರಗಲ್ಲುಗಳು, ಮತ್ತು ಶಾಸನಗಳನ್ನು ಗುರುತಿಸಿ ಅವು ಯಾವ ಕಾಲ ಘಟ್ಟಕ್ಕೆ ಸಂಬಧಿಸಿದವುಗಳೆAಬ ಮಾಹಿತಿ ಕಲೆ ಹಾಕಿ ಅವುಗಳ ಸಂರಕ್ಷಣೆಗೆ ಕ್ರಮವಹಿಸಲು ತಿಳಿಸಲಾಗಿದೆ. ಅಧಿಕಾರಿಗಳೊಂದಿಗೆ ಸ್ಥಳೀಯ ಗ್ರಾಮಸ್ಥರು ಒಂದುಗೂಡಿ ಐತಿಹಾಸಿಕ ಆಧಾರಗಳ ರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಭಾರತೀಯ ಪುರಾತತ್ವ ಇಲಾಖೆಯ ಶಾಸನತಜ್ಞೆ ಶ್ರೀದೇವಿ ತೇಜಸ್ವಿನಿ ಅವರು ಮರ್ಲೆ ಗ್ರಾಮದ ಚನ್ನಕೇಶವ ಸಿz್ದÉÃಶ್ವರ ಜೋಡಿ ಆಲಯಗಳ ಆವರಣದಲ್ಲಿರುವ ಶಾಸನದ ಕುರಿತು ಶಾಸನ ರಚನಕಾರರು, ರಾಜಮನೆತನ, ಕಾಲಘಟ್ಟ ಮತ್ತು ಶಾಸನದಲ್ಲಿ ಉಲ್ಲೇಖವಾಗಿರುವ ವಿಷಯಗಳ ಸುಧೀರ್ಘವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮರ್ಲೆ ಗ್ರಾಪಂ ಪಿಡಿಒ ರಾಜೇಶ್ವರಿ, ಮರ್ಲೆ ಗ್ರಾಪಂ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಲೀಲಾವತಿ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.