ಭಾರತೀಯ ಕಲೆ ಪರಂಪರೆ ಉಳಿಸಿ, ಬೆಳೆಸಿ

New Aital New147
Published on

ಹುಬ್ಬಳ್ಳಿ : ಕಲೆಯನ್ನು ಉಳಿಸಲು ಕಲಾವಿದರೇ ಆಗಬೇಕೆಂದೇನಿಲ್ಲ. ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿ, ಭಾರತೀಯ ಕಲೆ, ಪರಂಪರೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಹೇಳಿದರು.

ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ಶಾಲೆಯ 24ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಟ್ಟು ನೃತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ನೃತ್ಯ ಮಾಡಲಿರುವ ಪುಟಾಣಿ ಮಕ್ಕಳಿಗೆ ಪ್ರೋತ್ಸಾಹ ನೀಡಿದಾಗ ಮುಂಬರುವ ದಿನಗಳಲ್ಲಿ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದರು.

ಧಾರವಾಡದ ಖ್ಯಾತ ಸಿತಾರ ವಾದಕ ಉಸ್ತಾದ್ ಹಫೀಜ್ ಬಾಲೇಖಾನ್ ಅವರು, ‘ನರ ಜನ್ಮ ಬಂದಾಗ, ನಾಲಿಗೆ ಇರುವಾಗ ಕೃಷ್ಣ ಏನಬಾರದೆ..’ ಎಂಬ ಸುಂದರ ಗೀತೆ ಹಾಡಿದರು.

ಅತಿಥಿಯಾಗಿದ್ದ ನೇತ್ರಾವತಿ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಸೋಮೇಶ್ವರ ಮಾತನಾಡಿದರು.

ಕನ್ನಡ,ಹಿಂದಿ, ಮರಾಠಿಯ 15ಕ್ಕೂ ಹೆಚ್ಚು ವಿಠ್ಠಲನ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ಸಿತಾರ ವಾದಕ ಪಂ. ಶ್ರೀನಿವಾಸ ಜೋಶಿ, ತಬಲಾ ವಾದಕ ಡಾ. ನಾಗಲಿಂಗ ಮುರಗಿ ಸಾಥ್ ನೀಡಿದರು. ವಿದುಷಿ ಸೀಮಾ ಉಪಾಧ್ಯಾಯ ಹಾಗೂ ಇತರರು ಇದ್ದರು. ಡಾ. ಪವಿತ್ರಾ ಜೈನ್ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net