ಸಸ್ಯ ಸಮೃದ್ಧ ಪರಿಸರ ಉಳಿಸಿ

kusugal school
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನವು ಗಂಭೀರ ಪರಿಸರ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸುವಲ್ಲಿ ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಶುದ್ಧ ಮತ್ತು ಸಸ್ಯ ಸಮೃದ್ಧ ಪರಿಸರವನ್ನು ನಾವು ಉಳಿಸಬಹುದು ಎಂದು ವಿಜ್ಞಾನ ಶಿಕ್ಷಕ ಮತ್ತು ಸಂವಹನಕಾರ ಸಂಜೀವಕುಮಾರ ಭೂಶೆಟ್ಟಿ ಹೇಳಿದರು.

ತಾಲೂಕಿನ ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ.ಸಲೀಂ ಅಲಿ ಇಕೋ ಕ್ಲಬ್, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ಲಾಸ್ಟಿಕ್ ವಸ್ತುಗಳು ಬಿಸಾಡಿದ ಮೇಲೆ ದೀರ್ಘಕಾಲ ನಾಶವಾಗದೆ ಪರಿಸರದಲ್ಲಿ ಉಳಿಯುತ್ತವೆ. ಅವು ಮಣ್ಣಿನ ಗುಣಮಟ್ಟ ಹಾನಿಯಾಗಲು, ನದಿಗಳು ಮತ್ತು ಸಾಗರಗಳಲ್ಲಿ ಜೀವ ಜಲಚರ ಜೀವಿಗಳಿಗೆ ಅಪಾಯ ಉಂಟಾಗಲು ಕಾರಣವಾಗುತ್ತವೆ ಎಂದರು.

ಮುಖ್ಯೋಧ್ಯಾಪಕಿ ಶಿವಲೀಲಾ ಕಳಸಣ್ಣವರ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಟ್ಟಾಗ ಅದರಿಂದ ಹಾನಿಕಾರಕ ಅನಿಲಗಳು ಹೊರಬರುತ್ತವೆ. ಇವು ಗಂಭೀರ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಪರಿಸರದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣವನ್ನು ಹೆಚ್ಚಿಸುತ್ತವೆ ಎಂದ ಹೇಳಿದರು.

ಎಸ್​ಡಿಎಂಸಿ ಉಪಾಧ್ಯಕ್ಷ ಕಲ್ಲನಗೌಡ ಕೌಜಗೇರಿ ಮಾತನಾಡಿದರು. ರಾಜಬಿ ಮಿರ್ಜಾನವರ, ಮಹಾಂತೇಶ ಸಂಕರಡ್ಡಿ, ಪ್ರೊ. ಸಂಧ್ಯಾ ಕುಲಕರ್ಣಿ, ವಿ.ಎಫ್.ಚುಳಕಿ, ಪೊ›.ಮೇಘಾ ದೇಶಪಾಂಡೆ, ಪಿಡಿಓ ಶಶಿಧರ ಮಂಟೂರ, ಭಾನುಮತಿ ಆಡಗಲ್ಲ, ಅಮೀರಾಬಾನು ದಲಾಲ, ಪ್ರೀತಾ ಫರ್ನಾಂಡಿಸ್, ಲೋಕೇಶ ಡಿ., ಸುರೇಶ ನಾಯ್ಕ, ಪಿ.ಕೆ.ಪತ್ತಾರ, ವೆಂಕಟೇಶ ಪುರಾಣಿಕ, ಪರ್ವೆಜ ಶಾಮಣ್ಣವರ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಐ. ಎಂ.ಇಳಕಲ್ಲ ನಿರೂಪಿಸಿದರು. ಗುರುನಾಥ ಬರದೇಲಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net