ಕಾಲುವೆಯಲ್ಲಿದ್ದ ಹೆಬ್ಬಾವು ಸಂರಕ್ಷಣೆ

13 NMG 02 (2)
ನಾಗಮಂಗಲ ತಾಲೂಕಿನ ಇಸ್ಲಾಂಪುರದ ಬಳಿ ಹೇಮಾವತಿ ಕಾಲುವೆಯಲ್ಲಿ ಮೊಲವನ್ನು ನುಂಗುತ್ತಿರುವ ಹೆಬ್ಬಾವು.
Published on

ನಾಗಮಂಗಲ: ಕಾಲುವೆಯಲ್ಲಿ ಮೊಲ ನುಂಗುತ್ತಿದ್ದ ಹೆಬ್ಬಾವನ್ನು ಸ್ಥಳೀಯ ಉರಗ ತಜ್ಞರ ನೆರವಿನಿಂದ ಸುರಕ್ಷಿತವಾಗಿ ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ತಾಲೂಕಿನ ಇಸ್ಲಾಂಪುರ ಬಳಿಯ ಹೇಮಾವತಿ ಕಾಲುವೆಯಲ್ಲಿ ಮೊಲವನ್ನು ನುಂಗುತ್ತಿದ್ದ ಹೆಬ್ಬಾವನ್ನು ಸ್ಥಳೀಯರು ಗುರುವಾರ ಗಮನಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ಆರ್.ಎನ್.ಮಂಜುನಾಥ್ ಪರಿಶೀಲನೆ ನಡೆಸಿದರು.

ನಂತರ ಉರಗತಜ್ಞ ಆನಂದ್ ಅವರನ್ನು ಸ್ಥಳಕ್ಕೆ ಕೆರೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದ ನಂತರ ಮೇಲುಕೋಟೆ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ ಆರ್.ಎನ್.ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಅರಣ್ಯ ಇಲಾಖೆಯ ಸಿಬ್ಬಂದಿ ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net