ಆರ್ಥಿಕ ವರ್ಷದ ಯೋಜನಾ ವರದಿ ಮಂಡನೆ

17 ckm 10
ಚಿಕ್ಕಮಗಳೂರು ತಾಲೂಕು ಮುಗುಳುವಳ್ಳಿ ಗ್ರಾಪಂ ಮಟ್ಟದ ಜಿಪಿಎಲ್ ಇ ಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಆಶಾ ಉದ್ಘಾಟಿಸಿದರು. ಸವಿತಾ, ಸುಮಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ಮುಗುಳುವಳ್ಳಿ ಗ್ರಾಪಂ ಮಟ್ಟದ ಜಿಪಿಎಲ್ಇ ಒಕ್ಕೂಟದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ಆಶಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟದ ಆಡಿಟ್ ವರದಿ, ಜಮಾಖರ್ಚು ಹಾಗೂ ಮುಂದಿನ ಆರ್ಥಿಕ ವರ್ಷದ ಯೋಜನಾ ವರದಿಯನ್ನು ಮಂಡಿಸಲಾಯಿತು.

ಮುಗುಳುವಳ್ಳಿ ಜಿಪಿಎಲ್ 1,36,800 ರೂಪಾಯಿ ಲಾಭಾಂಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ, ಪ್ರತಿ ಮಹಿಳೆ ಒಕ್ಕೂಟದ ವ್ಯಾಪ್ತಿಗೆ ಬರುವಂತೆ ಹಾಗೂ ಸಂಜೀವಿನಿ ಯೋಜನೆ ಉದ್ದೇಶ ಸಾಕಾರಗೊಳಿಸಲು ಒಕ್ಕೂಟಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಮುಗುಳುವಳ್ಳಿ ಗ್ರಾಪಂ ಅಧ್ಯಕ್ಷೆ ಸವಿತಾ, ಪಿಡಿಒ ಸುಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net