ಮೈಸೂರಿನಲ್ಲಿ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ಪ್ರದಾನ

Presentation of Rajendra Shri Seva Award
Published on

ಮೈಸೂರು: ಮೈಸೂರು ಶರಣ ಮಂಡಳಿ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದವರಿಗೆ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಾಮರಾಜನಗರದ ಸುವರ್ಣ ಗಂಗೋತ್ರಿ ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಮಧುಮೇಹ ತಜ್ಞ ಡಾ. ವಿ.ಲಕ್ಷ್ಮೀನಾರಾಯಣ್, ಸಮಾಜ ಸೇವಕರಾದ ಕೆ.ಬಿ.ಕುಮಾರ್, ಬಿ.ಎಸ್. ತುಳಸಿರಾಮ, ಎಸ್.ಮೂರ್ತಿ, ಎಚ್.ಎಸ್. ವೀರೇಶ್ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕೋಸ್ಕರ ಸಾಕಷ್ಟು ಶ್ರಮಿಸಿದರು. ಹಲವು ವಿದ್ಯಾರ್ಥಿ ನಿಲಯಗಳು, ವಿದ್ಯಾಸಂಸ್ಥೆಗಳನ್ನು ತೆರೆದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು ಎಂದರು.

ಮೈಸೂರು ವಿಶ್ವ ವಿದ್ಯಾಲಯದ ಸಂಜೆ ಕಾಲೇಜು ಉಪನ್ಯಾಸಕ ಪ್ರೊ.ಕೆ.ಪಿ.ಮಹದೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಎಪಿಎನ್ ಪ್ರಾಪರ್ಟೀಸ್ ಸ್ಥಾಪಕ ಎ.ಪಿ. ನಾಗೇಶ್, ಶರಣಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಗೌರವ ಅಧ್ಯಕ್ಷ ಯು.ಎಸ್.ಶೇಖರ್, ಪದಾಧಿಕಾರಿಗಳಾದ ಬಿ.ಮಹದೇವಸಾಮಿ, ಟಿ.ವಿ.ಮಧುಕರ್, ಪಿ.ಪಿ.ನಾಗರಾಜು, ಎಂ.ಜಯಪ್ರಕಾಶ್, ಬಿ.ಎಸ್.ಕಾಶಿನಾಥ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net