

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ರೇಣವ್ವ ರುದ್ರಪ್ಪ ಅಂಗಡಿ ಸಂಸ್ಮರಣ ದತ್ತಿ ಅಂಗವಾಗಿ ಜ. 8ರಂದು ಸಂಜೆ 5.30 ಗಂಟೆಗೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಉಪನ್ಯಾಸ ಮತ್ತು `ತಾಯಿ' ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದೆ. ಹುಬ್ಬಳ್ಳಿಯ ಹಿರಿಯ ವೈದ್ಯ ಡಾ. ಮಹೇಶ ನಾಲವಾಡ ಹಾಗೂ ಡಾ. ರವಿಕಿರಣ ಅವರಿಗೆ `ತಾಯಿ' ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನವಲಗುಂದ ತಾಲೂಕಿನ ಶಿರಕೋಳ ಹಿರೇಮಠ ಪಟ್ಟದ್ದೇವರು ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಧಾರವಾಡ ಬಸವ ಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುರೇಶ ಒಂಟಗೋಡಿ ಪ್ರಶಸ್ತಿ ಪ್ರದಾನ ಮಾಡುವರು. ಬೆಂಗಳೂರಿನ ಹಿರಿಯ ವೈದ್ಯೆ ಡಾ. ವಿಜಯಲಕ್ಷ್ಮೀ ಬಾಳೆಕುಂದರಗಿ ಅವರು `ತಾಯಿ ಮತ್ತು ಸಂಸ್ಕೃತಿ' ವಿಷಯ ಕುರಿತು ಉಪನ್ಯಾಸ ನೀಡುವರು. ಹುಬ್ಬಳ್ಳಿಯ ಜಾನಪದ ಕಲಾವಿದೆ ಡಾ. ಶೋಭಾ ಜಾಬೀನ ವಚನ ಗಾಯನ ಪ್ರಸ್ತುತಪಡಿಸುವರು.