

ಮೈಸೂರು: ಅರಿವು ಸಂಸ್ಥೆಯ 12ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 9 ಸಾಧಕರಿಗೆ ‘ಅರಿವು ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಮಾನುಜ ರಸ್ತೆಯ ನಮೋ ಯೋಗಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಆರ್.ಎಚ್.ಪವಿತ್ರಾ, ದೀಪಾನಾಯಕ್(ಶಿಕ್ಷಣ ಕ್ಷೇತ್ರ), ಶ್ವೇತಾ ಮಡಪ್ಪಾಡಿ (ಸಂಗೀತ ಕ್ಷೇತ್ರ), ಕೆ.ಬಿ.ಲಿಂಗರಾಜು(ಕೈಗಾರಿಕೆ), ಡಾ.ಎಸ್.ಕೆ.ಮಿಥ್ಥಲ್(ವನ್ಯಜೀವಿ ಸಂರಕ್ಷಣೆ), ಜಯಪ್ರಕಾಶ್ ಗೌಡ (ಚಿತ್ರರಂಗ), ಚರಣ್ ರಾಜ್(ಕ್ರೀಡೆ), ನಾಗಮಣಿ (ಸಾಮಾಜಿಕ), ಎಂ.ಕೆಬ್ಬೆಹುಂಡಿ ಶಿವಕುಮಾರ್(ರಂಗಭೂಮಿ) ಅವರಿಗೆ ‘ಅರಿವು ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಸಮಾಜ ಸೇವಕ ರಘುರಾಮ್ ವಾಜಪೇಯಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಎಸ್.ಇ.ಗಿರೀಶ್, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಮುಖಂಡರಾದ ಬಸವರಾಜ್ ಬಸಪ್ಪ, ರೇಖಾ, ಕಡಕೋಳ ಜಗದೀಶ್ ಇತರರಿದ್ದರು.