ಅನಸೂಯ ಕುಲಕರ್ಣಿ ಅವರಿಂದ ‘ಆಂಗ್‌ಕ್ಲುಂಗ್ ವಿಶೇಷ ವಾಯುವಾದ್ಯ’ ಪ್ರಸ್ತುತಿ

Music
Published on

ಮೈಸೂರು: ಸಂಗೀತ ರಸಿಕರ ಮೆಚ್ಚುಗೆ ಗಳಿಸಿರುವ ಡಾ.ಎಚ್.ಎಸ್.ಅನಸೂಯ ಕುಲಕರ್ಣಿ ಅವರು ಡಿ.26 ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-262 ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ‘ಆಂಗ್‌ಕ್ಲುಂಗ್ ವಿಶೇಷ ವಾಯುವಾದ್ಯ’ ಪ್ರಸ್ತುತ ಪಡಿಸಲಿದ್ದಾರೆ. ಇವರಿಗೆ ವಿದ್ವಾನ್ ಎನ್.ಎನ್.ಗಣೇಶ್‌ಕುಮಾರ್(ವಯೋಲಿನ್), ವಿದ್ವಾನ್ ಎಚ್.ಎಲ್.ಶಿವಶಂಕರಸ್ವಾಮಿ(ಮೃದಂಗ), ವಿದ್ವಾನ್ ಎಸ್.ಮಂಜುನಾಥ್(ಘಟಂ) ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net