ಅರ್ಥಶಾಸ್ತ್ರ ವಿಭಾಗಕ್ಕೆ ಚಾಂಪಿಯನ್‌ಷಿಪ್

Published on

ಕಾಸರಗೋಡು: ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸಲು, ಸೃಜನಶೀಲ ಪ್ರತಿಭೆ ಉತ್ತೇಜಿಸಲು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಪ್ರೇರಣಾ’ದಲ್ಲಿ ವಿವಿಯ ಅರ್ಥಶಾಸ್ತ್ರ ವಿಭಾಗ 39 ಅಂಕ ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಾಜಿ ಉಪಕುಲಪತಿ ಪ್ರೊ.ಎಚ್.ವೆಂಕಟೇಶ್ವರಲು ಅವರ ಹೆಸರಿನಲ್ಲಿ ಸ್ಥಾಪಿಸಲಾದ ಉಪಕುಲಪತಿಗಳ ರೋಲಿಂಗ್ ಶೀಲ್ಡ್ ಅನ್ನು ಉಪಕುಲಪತಿ ಪ್ರೊ.ಸಿದ್ದು ಪಿ.ಅಲಗೂರ್ ಪ್ರದಾನ ಮಾಡಿದರು. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ರೋಲಿಂಗ್ ಶೀಲ್ಡ್ ಸ್ವೀಕರಿಸಿದರು.

ಪ್ರೇರಣಾ ಅಂಗವಾಗಿ ಜಸ್ಟ್ ಎ ಮಿನಿಟ್, ಸಾಮರ್ಥ್ಯ ಪರೀಕ್ಷೆ, ಸುಡೋಕು, ಪಾತ್ರಾಭಿನಯ, ಪತ್ರ ಬರವಣಿಗೆ, ರಸಪ್ರಶ್ನೆ, ಚರ್ಚೆ, ಕಿರುಚಿತ್ರ, ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ವಿಭಾಗದಿಂದ ಆಯ್ದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬಿಯಾರ್, ಗಾಯಕ ಅಖಿಲ್ ದೇವ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ರಾಜೇಂದ್ರ ಪಿಲಾಂಗಟ್ಟ, ಪ್ರೇರಣಾ ಸಂಯೋಜಕ ಡಾ.ಶ್ಯಾಮ್ ಪ್ರಸಾದ್, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಡಾ.ವಿಷ್ಣುಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಹದ್ ಎನ್.ಟಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net