

ದೊಡ್ಡಬಳ್ಳಾಪುರ : ತಾಲೂಕಿನ ಗೊಲ್ಲಹಳ್ಳಿ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶುಕ್ರವಾರ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮಾ ಭೇಟಿ ನೀಡಿ ವಸತಿ ನಿಲಯದ ಪ್ರವೇಶಾತಿ ಪರೀೆಗಳ ಸಿದ್ಧತೆ ಮತ್ತು ವಸತಿ ಶಾಲೆಯಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ವಸತಿ ಶಾಲೆಯಲ್ಲಿನ ಕೊಠಡಿಗಳು, ಭೋಜನಾಲಯ, ವಿದ್ಯಾರ್ಥಿಗಳ ವಸತಿ ನಿಲಯ, ಶೌಚಗೃಹ, ಶಿಕ್ಷರ ವಸತಿಗೃಹ, ಗ್ರಂಥಾಲಯ, ಗಣಕಯಂತ್ರ ಕೊಠಡಿ, ಪ್ರಯೋಗಾಲಯ ಕೋಣೆಗಳನ್ನು ವೀಸಿ ಅಡುಗೆ ಕೋಣೆ ಹಾಗೂ ಶುದ್ಧ ಕುಡಿಯುವ ನೀರಿನ ಟಕ ಸ್ವಚ್ಛವಾಗಿಡುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.100ಕ್ಕೆ 100ರಷ್ಟು ಆಗುವಂತೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಉತ್ತಮ ಆಹಾರ ಮತ್ತು ಶಿಕ್ಷಣ ನೀಡಬೇಕೆಂದು ಪ್ರಾಧ್ಯಾಪಕರಿಗೆ ಸೂಚನೆ ನೀಡಿದರು. ವಿದ್ಯಾರ್ಥಿಗಳ ಊಟ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಅವರಿಂದ ವಸತಿ ನಿಲಯದ ಸೌಲಭ್ಯ ಹಾಗೂ ಶಿಕ್ಷಣದ ಬಗ್ಗೆ ವಿಚಾರಿಸಿದರು. ಜತೆಗೆ ಏನಾದರು ಸಮಸ್ಯೆಗಳಿದ್ದಲ್ಲಿ ನೇರವಾಗಿ ನಮ್ಮನ್ನು ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲೆಯ ಕುಂದಾಣ ಮತ್ತು ಗೊಲ್ಲಹಳ್ಳಿ ಬಳಿಯ ಮುರಾರ್ಜಿ ವಸತಿ ಶಾಲೆ ಪ್ರವೇಶಾತಿ ಪರೀೆ ನಡೆಯುತ್ತಿದ್ದು, ಸಿದ್ಧತೆಗಳನ್ನು ಪರಿಶೀಲನೆ ಮಾಡಲಾಗಿದೆ. ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳಿಗೆ ಭೇಟಿ ನೀಡಿದೆ. ಭೋಜನಾಲಯ, ವಿದ್ಯಾರ್ಥಿಗಳ ವಸತಿ ನಿಲಯ, ಶೌಚಗೃಹ, ಗ್ರಂಥಾಲಯ ಸೇರಿ ಹಲವು ಕೊಠಡಿಗಳನ್ನು ವೀಸಿ, ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವಲ್ಲಿ ಗಮನ ನೀಡುವಂತೆ ಸೂಚಿಸಲಾಗಿದೆ. > ದುರ್ಗಾಶ್ರೀ ಎಸಿ, ದೊಡ್ಡಬಳ್ಳಾಪುರ