ಶಾಲೆಗಳ ಮರು ಆರಂಭಕ್ಕೆ ಸಿದ್ಧತೆ

ಅಳವಂಡಿ ಸಮೀಪದ ಗುಡ್ಲಾನೂರ ಸಹಿಪ್ರಾ ಶಾಲಾ ಆವರಣದಲ್ಲಿ ಬೆಳೆದ ಕಸವನ್ನು ಟ್ರ್ಯಾಕ್ಟರ್ ಮೂಲಕ ಸ್ವಚ್ಛಗೊಳಿಸುತ್ತಿರುವುದು.
ಅಳವಂಡಿ ಸಮೀಪದ ಗುಡ್ಲಾನೂರ ಸಹಿಪ್ರಾ ಶಾಲಾ ಆವರಣದಲ್ಲಿ ಬೆಳೆದ ಕಸವನ್ನು ಟ್ರ್ಯಾಕ್ಟರ್ ಮೂಲಕ ಸ್ವಚ್ಛಗೊಳಿಸುತ್ತಿರುವುದು.
Published on

ಅಳವಂಡಿ: ಬೇಸಿಗೆ ರಜೆ ಮುಗಿದು ಶಾಲೆಗಳು ಗುರುವಾರ ಆರಂಭವಾಗುತ್ತಿದ್ದು, ಶಿಕ್ಷಕರು, ಸಿಬ್ಬಂದಿ ಶಾಲೆಯನ್ನು ಸ್ವಚ್ಛಗೊಳಿಸುವ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಶಾಲಾ ಕೊಠಡಿಗಳು, ಆವರಣ, ಬಿಸಿಯೂಟದ ಕೊಠಡಿ, ಪಾತ್ರೆಗಳು ಹಾಗೂ ಶೌಚಗೃಹ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಬಿಸಿಯೂಟಕ್ಕೆ ಅಗತ್ಯವಾದ ಪಡಿತರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಿಆರ್‌ಪಿ ವಿಜಯಕುಮಾರ ಟಿಕಾರೆ ಗ್ರಾಮದ ಕೇಂದ್ರೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿ ಶಾಲೆ ಆರಂಭದ ಸಿದ್ಧತೆ ಕಾರ್ಯವನ್ನು ಪರಿಶೀಲಿಸಿ ಅಗತ್ಯ ಸಲಹೆಗಳನ್ನು ನೀಡಿದರು. ಮುಖ್ಯ ಶಿಕ್ಷಕರಾದ ಮಾರುತಿ ಕಾತರಕಿ, ನಾರಾಯಣ ಅಂಬೋರೆ, ಪಕೀರಪ್ಪ ಕಿಲ್ಲೇದ, ಶಿಕ್ಷಕರಾದ ಯಲ್ಲರಡ್ಡಿ ತವದಿ, ಬಿಸಿಯೂಟ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net