

ಮಡಿಕೇರಿ: ಹಿರಿಯ ಪತ್ರಕರ್ತ ಬಿ.ಜಿ.ಅನಂತ ಶಯನರವರು ಬರೆದಿರುವ ಪತ್ರಿಕೋದ್ಯಮದ, ಅನುಭವ ಆಧಾರಿತ ಪುಸ್ತಕ ಸೊಡರು ಮೇ೧೪ ರಂದು ಮಡಿಕೇರಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಎಂದು ಬಿ.ಜಿ.ಅನಂತ ಶಯನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಸಿ.ನಾಣಯ್ಯ, ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸ್ಥಾಪಕ ಕೆ.ಬಿ.ಗಣಪತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಪ್ರೆಸ್ ಕ್ಲಬ್ ಹಾಗೂ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ.ರಮೇಶ್, ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಭಾಗವಹಿಸಲಿದ್ದಾರೆ.
ಪುಸ್ತಕದೊಳಗೆ ವರದಿಗಾರಿಕೆ ಸಂದರ್ಭ ಉಂಟಾಗುವ ಎಡರು ತೊಡರುಗಳು, ಇರಿಸು ಮುರಿಸುಗಳು, ಕಾನೂನು ಅಡಚಣೆಗಳು, ಬೆದರಿಕೆಗಳು, ಸ್ವಯಂಕೃತ ಅಪರಾಧಗಳು ಇತ್ಯಾದಿ ವಿಚಾರ ಉದಾಹರಣೆ ಸಹಿತ ನೀಡಲಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಜಿ.ಚಿದ್ವಿಲಾಸ್‌ರವರ ಮಾಲೀಕತ್ವದ ರೆಡ್‌ಬ್ರಿಕ್ಸ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ ಸಂಜೆ ೫.೩೦ಕ್ಕೆ ನಡೆಯಲಿದೆ ಎಂದು ಬಿ.ಜಿ.ಅನಂತ ಶಯನ ತಿಳಿಸಿದ್ದಾರೆ.