ಬಂಡೀಪುರ ಕ್ಯಾಂಪಸ್ ಸ್ಥಳಾಂತರಕ್ಕೆ ಸಿದ್ಧತೆ

IMG-20200604-WA0000
Published on

ಗುಂಡ್ಲುಪೇಟೆ: ಬಂಡೀಪುರದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗಳು ಸೇರಿ ಇಡೀ ಕ್ಯಾಂಪಸ್ ಸ್ದಳಾಂತರಗೊಳ್ಳಲಿದೆ. ಇದಕ್ಕಾಗಿ 30 ಕೋಟಿ ರೂ. ಮೊತ್ತದ ನೀಲಿನಕ್ಷೆ ಸಿದ್ಧಪಡಿಸಲಾಗಿದೆ.

ರಾಷ್ಟೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾರ್ಗಸೂಚಿಯಂತೆ ಬಂಡೀಪುರದಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಅವಕಾಶ ಇಲ್ಲದ ಕಾರಣದಿಂದ ಇಡೀ ಕ್ಯಾಂಪಸ್ ಮೇಲುಕಾಮನಹಳ್ಳಿಗೆ ಸ್ಥಳಾಂತರಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಟಿಸಿಎ ಮಾರ್ಗಸೂಚಿಯಂತೆ ಕಳೆದ ವರ್ಷ ಜೂನ್‌ನಲ್ಲಿ ಬಂಡೀಪುರ ಸಫಾರಿ ಟಿಕೆಟ್ ಕೌಂಟರ್ ಅನ್ನು ಮೇಲುಕಾಮನಹಳ್ಳಿ ಸಮೀಪ ಸ್ಥಳಾಂತರಿಸಲಾಗಿತ್ತು. ಈಗ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ನಿವಾಸ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೆೇರಿ, ನಿವಾಸ ಹಾಗೂ ವಲಯ್ಯಧಿಕಾರಿ ಕಚೆೇರಿ, ನಿವಾಸ ಹಾಗೂ ಎಲ್ಲ ರೀತಿಯ ಪ್ರವಾಸಿಗರ ವಸತಿಗೃಹಗಳ ಸ್ದಳಾಂತರಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಬಂಡೀಪುರ ಸಫಾರಿ ಸ್ಥಳಾಂತರದ ನಂತರ ಆನೆಗಳು ವಸತಿಗೃಹಗಳ ಪೈಪ್‌ಗಳು, ಕಟ್ಟಡಗಳನ್ನು ನಾಶ ಮಾಡುತ್ತಿದ್ದವು. ಚಿರತೆ, ಹುಲಿಗಳು ಸಂಜೆ ಆಗುತ್ತಿದ್ದಂತೆಯೇ ಹಳೆ ಸಫಾರಿ ಕೇಂದ್ರದ ಸಮೀಪ ಬರುತ್ತಿದ್ದವು. ಇದರಿಂದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ತೊಂದರೆ ಆಗುತ್ತಿತ್ತು. ಜತೆಗೆ ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ತೊಂದರೆ ಆಗುತ್ತದೆ ಎಂಬುವುದನ್ನು ಮನಗಂಡ ಅಧಿಕಾರಿಗಳು ಸ್ಥಳಾಂತರಕ್ಕೆ ಮುಂದಾಗಿದ್ದಾರೆ.

ಸ್ಥಳಾಂತರಕ್ಕೆ ಕಾರ್ಯಕ್ಕೆ ಸರ್ಕಾರ ದಿಢೀರ್ 30 ಕೋಟಿ ರೂ. ಅನುದಾನ ನೀಡಲು ಕಷ್ಟ ಆಗುವುದರಿಂದ ಮೂರು ಹಂತಗಳಲ್ಲಿ ಸ್ಥ್ದಳಾಂತರ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸರ್ಕಾರ ಅನುಮತಿ ನೀಡಿದ ತಕ್ಷಣ ಕಟ್ಟಡಗಳನ್ನು ನೆಲಸಮ ಮಾಡಿ ಒಂದು ಕಟ್ಟಡವನ್ನು ಉಳಿಸಿಕೊಂಡು ಕಳ್ಳಬೇಟೆ ಶಿಬಿರ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಹೈವೇ ಪ್ಯಾಟ್ರೋಲ್ ಮಾಡಿಕೊಂಡು ಗಸ್ತು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಟಿಸಿಎ ಮಾರ್ಗಸೂಚಿಯಂತೆ ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗಳು ಹಾಗೂ ನಿವಾಸಗಳನ್ನು ಮೇಲುಕಾಮನಹಳ್ಳಿ ಸಮೀಪದ ಟಿಕೆಟ್ ಕೌಂಟರ್ ಬಳಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈಗಾಗಲೇ 25 ರಿಂದ 30 ಕೋಟಿ ರೂ. ವೆಚ್ಚದ ನೀಲಿನಕ್ಷೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
> ಟಿ. ಬಾಲಚಂದ್ರ ಬಂಡೀಪುರ ಅರಣ್ಯ ಹುಲಿ ಯೋಜನೆಯ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net