ಭಯಪಡದೇ ಪರೀಕ್ಷೆಗೆ ಸಿದ್ದರಾಗಿ

Prepare for the exam without fear.
ಹುನಗುಂದ ವಿ.ಮ.ವಿ.ವ ಶಾಲೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ಡಿಡಿಪಿಐ ವಿವೇಕಾನಂದ ಉದ್ಘಾಟಿಸಿದರು. ಜಾಸ್ಮಿನ್ ಕಿಲ್ಲೇದಾರ, ಅರುಣೋದಯ ದುದ್ಗಿ, ರವಿ ಹುಚನೂರ ಮತ್ತಿತರರಿದ್ದರು.
Published on

ಹುನಗುಂದ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ, ಯಾವುದೇ ಭಯವಿಲ್ಲದೆ ವಾರ್ಷಿಕ ಪರೀಕ್ಷೆಗೆ ಸಿದ್ದರಾಗಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ವಿವೇಕಾನಂದ ಹೇಳಿದರು.

ಪಟ್ಟಣದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುವ ಪೂರ್ವ, ಕಿರಿಯ, ಹಿರಿಯ, ಆಂಗ್ಲ, ಪ್ರಾಥಮಿಕ ಮತ್ತು ಪ್ರೌಢ ಹಾಗೂ ಮಾದರಿ ಶಾಲೆಗಳ ವಾರ್ಷಿಕ ಬೀಳ್ಕೊಡುವ ಸಮಾರಂಭದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ರಮ ಎಲ್ಲ ವಿಷಯಗಳಲ್ಲಿಯೂ ಬಹುತೇಕ ಸರಳೀಕರಣಗೊಂಡಿದೆ. ಶಿಕ್ಷಕರು ಸದಾ ಅಧ್ಯಯನದೊಂದಿಗೆ ಪಾಠ ಬೋಧನೆ ಮಾಡುತ್ತಾರೆ. ಆ ನಿಟ್ಟಿನಲ್ಲಿ ಎಲ್ಲ ಮಕ್ಕಳು ಉತ್ತಮ ಅಂಕ ಪಡೆದು ತಾಲೂಕು ಮತ್ತು ಜಿಲ್ಲೆಗೆ ಹೆಚ್ಚಿನ ದರ್ಜೆ ಸಿಗಲು ಶ್ರಮಿಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಮಾತನಾಡಿ, ಮುಂದೆ ಗುರಿ ಹಿಂದೆ ಗುರು ಎಂಬ ತತ್ವ ನಂಬಿ ನಡೆದರೆ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿದರು.

ನಿರ್ದೇಶಕರಾದ ಬಸವರಾಜ ಕೆಂದೂರ, ಡಾ. ದೇಸಾಯಪ್ಪ ಹವಾಲ್ದಾರ, ರವಿ ಹುಚನೂರ, ರಾಚಪ್ಪ ರಾಜಮನಿ, ವೀರಣ್ಣ ಬಳೂಟಗಿ, ಸಂಗಣ್ಣ ಚಿನಿವಾಲರ, ಅರುಣೋದ ದುದ್ಗಿ, ಆಡಳಿತಾಧಿಕಾರಿ ರಾಜಶೇಖರ ಬ್ಯಾಳಿ, ಮುಖ್ಯ ಶಿಕ್ಷಕ ಪಿ.ಎಂ. ಅಕ್ಕಿ, ಎಂ.ಐ. ರೋಣದ, ಪಿ.ಎಸ್. ಹಳ್ಳೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net