

ಯಲಬುರ್ಗಾ: ಸಂತ ಸೇವಾಲಾಲ್ ಜಯಂತಿ ಅರ್ಥಪೂರ್ಣ ಆಚರಣೆಗೆ ಎಲ್ಲರೂ ಸಹಕರಿಸಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಇದನ್ನೂ ಓದಿ:ವ್ಯಾಲೆಂಟೈನ್ಸ್ ಡೇ ಆಚರಣೆಗೆ ವಿರೋಧ
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಫೆ.15ರಂದು ಪಟ್ಟಣದ ಮಾರನಾಳ ರಸ್ತೆಯ ಸೇವಾಲಾಲ್ ವೃತ್ತಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಗುವುದು. ವೃತ್ತಕ್ಕೆ ಬಣ್ಣ ಹಚ್ಚಲು, ಹೈಮಾಸ್ಟ್ ಕಂಬಕ್ಕೆ ಬಲ್ಬ್ ಅಳವಡಿಸಲು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು. ಸರ್ಕಾರಿ ಕಚೇರಿ, ಅಂಗನವಾಡಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಪಪಂ ಸದಸ್ಯ ಹನುಮಂತಪ್ಪ ಭಜಂತ್ರಿ, ಶಿರಸ್ತೇದಾರ್ ಎಂ.ದೇವರಡ್ಡಿ, ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ, ಅಖೀಲ ಭಾರತ ಬಂಜಾರ ಸೇವಾ ಸಂಘ ತಾಲೂಕು ಅಧ್ಯಕ್ಷ ಶಿವನಪ್ಪ ನಾಯಕ, ಉಪಾಧ್ಯಕ್ಷ ದೇವಪ್ಪ ಚಿಕ್ಕಮ್ಯಾಗೇರಿ, ಗೋರಸೇನಾ ಜಿಲ್ಲಾ ಉಪಾಧ್ಯಕ್ಷ ಶಂಕರ ನಾಯ್ಕ, ದ್ವಿತೀಯ ದರ್ಜೆ ಸಹಾಯಕ ಶಿವಪುತ್ರಪ್ಪ ತಿಪ್ಪನಾಳ, ಅಧಿಕಾರಿಗಳಾದ ಎಚ್.ಡಿ.ಪ್ರೇಮಾ, ಲಲಿತಾ ನಾಯ್ಕರ, ಹನಮಗೌಡ ಪಾಟೀಲ್, ರಮೇಶ, ಪ್ರಮುಖರಾದ ಚನ್ನಪ್ಪ ಜಾದವ, ಯಲ್ಲಪ್ಪ ನಾಯ್ಕ, ಚಂದ್ರು ನಾಯ್ಕ, ಶೇಖರಪ್ಪ ನಾಯ್ಕ, ಕೃಷ್ಣಪ್ಪ ರಾಠೋಡ, ಮಹೇಶ ಇತರರಿದ್ದರು.