

ಧಾರವಾಡ: ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಿರಬೇಕು. ಈಗಿನಿಂದಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳಬೇಕು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘಗಳ ಉದ್ಘಾಟನೆಯನ್ನು ಇತ್ತೀಚೆಗೆ ನೆರವೇರಿಸಿ ಅವರು ಮಾತನಾಡಿದರು.
ಮಾಡುವ ಕಾರ್ಯದಲ್ಲಿ ತಾರತಮ್ಯ ಇರಬಾರದು. ಸ್ಪಷ್ಟ ಗುರಿಯೊಂದಿಗೆ ಓದಿನತ್ತ ಗಮನ ಹರಿಸಿ ಯಶಸ್ಸು ಸಾಽಸಬೇಕು ಎಂದರು.
ಎಸಿಪಿ ಪ್ರಶಾಂತ ಸಿದ್ದನಗೌಡರ ಮಾತನಾಡಿ, ಪದವೀಧರರಾಗುವುದು ಶಿಕ್ಷಣದ ಉದ್ದೇಶವಲ್ಲ. ಬದುಕಿಗೆ ನೆರವಾಗಬಲ್ಲ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ತಂದೆ- ತಾಯಿ, ಹಿರಿಯರನ್ನು ಗೌರವಿಸುತ್ತ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.
ಸAಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಡಾ. ವಿ.ಐ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಡಾ. ನೀಲಕ್ಕ ಪಾಟೀಲ ಸ್ವಾಗತಿಸಿದರು. ಪ್ರೊ. ಶ್ರೀದೇವಿ ಸಂಗೊಳ್ಳಿ ಪರಿಚಯಿಸಿದರು. ಪ್ರೊ. ಶಶಾಂಕಾ ಹಾದಿಮನಿ ನಿರೂಪಿಸಿದರು.
ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಡಾ. ಡಿ.ಸಿ. ಪಾವಟೆ ಅತ್ಯುತ್ತಮ ಎನ್.ಎಸ್.ಎಸ್. ಅಽಕಾರಿ ಪ್ರಶಸ್ತಿ ಪಡೆದ ಡಾ. ತಾರಾ ಬಿ.ಎನ್. ಅವರನ್ನು ಸನ್ಮಾನಿಸಲಾಯಿತು.
ಪ್ರೊ. ಆಶಾ ನಿಡವಣಿ, ಪ್ರೊ. ನಾಗರಾಜ ಕೋಟಗಾರ, ರವೀಂದ್ರ ಬಸವನಾಳ, ಅಶೋಕ ಚಿಕ್ಕೋಡಿ, ಎಸ್.ಬಿ. ಶಿವಳ್ಳಿ, ಸಿ.ಎಸ್. ಪಾಟೀಲ, ಎಫ್.ವಿ. ಕಲ್ಲೂರ, ಇತರರಿದ್ದರು.