2 ತಾಸಿನಲ್ಲಿಯೇ ಕ್ಯಾಂಡಲ್, ಆಕಾಶಬುಟ್ಟಿ ತಯಾರು

h10-IMA
Published on

ಧಾರವಾಡ: ದೀಪಾವಳಿ ಹಬ್ಬದ ನಿಮಿತ್ತ ಇಲ್ಲಿನ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಧಾರವಾಡ ಮಹಿಳಾ ವೈದ್ಯರ ಘಟಕದ ಕಚೇರಿಯಲ್ಲಿ ವೈದ್ಯೆಯರು ಮತ್ತು ಅವರ ಮಕ್ಕಳಿಗಾಗಿ ಕ್ಯಾಂಡಲ್ ಮತ್ತು ಆಕಾಶಬುಟ್ಟಿ ತಯಾರು ಕಾರ್ಯಾಗಾರವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಸುಮಾರು 30 ಮಕ್ಕಳು ಹಾಗೂ 25ಕ್ಕೂ ಹೆಚ್ಚು ವೈದ್ಯೆಯರು, ಕ್ಯಾಂಡಲ್ ಮತ್ತು ಆಕಾಶ ಬುಟ್ಟಿಗಳನ್ನು 2 ತಾಸಿನಲ್ಲಿಯೇ ಕಲಿತು, ತಯಾರಿಸಿ ಅಲ್ಲಿದ್ದವರನ್ನು ಅಚ್ಚರಿಗೊಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಗೌರಿ ಪಾಟೀಲ ಬೆಲ್ಲದ ಹಾಗೂ ಡಾ. ಸಂಧ್ಯಾ ಕುಲಕರ್ಣಿ ಅವರು, ಮಕ್ಕಳು ಮತ್ತು ವೈದ್ಯೆಯರಿಗೆ ತರಬೇತಿ ನೀಡಿದರು. ಘಟಕದ ಚೇರ್ಮನ್ ಡಾ. ಕವಿತಾ ಮಂಕಣಿ, ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ ಇತರರು ಉಪಸ್ಥಿತರಿದ್ದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net