ಲಕ್ಷ್ಮೇಶ್ವರದಲ್ಲಿ ಸಡಗರದ ನಾಗಪಂಚಮಿ

LXR
ಲಕ್ಷ್ಮೇಶ್ವರದಲ್ಲಿ ಹಬ್ಬಕ್ಕಾಗಿ ಬಗೆ ಬಗೆಯ ಉಂಡಿ ಸಿದ್ಧಪಡಿಸಿರುವ ಮಹಿಳೆಯರು.
Published on

ಲಕ್ಷ್ಮೇಶ್ವರ: ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬೆಳೆಗಳು ಬಾಡುತ್ತಿದ್ದು ಬರದ ಛಾಯೆ ಆವರಿಸುತ್ತಿದೆ. ಆದರೂ ಶ್ರಾವಣಮಾಸದ ನಾಗರಪಂಚಮಿ ಹಬ್ಬದ ಸಡಗರ ಎಲ್ಲೆಡೆ ಮನೆಮಾಡಿದೆ. ದಿನಸಿ, ಹೂವು, ಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದ್ದರೂ ಹಬ್ಬಕ್ಕಾಗಿ ಜನರು ಕಷ್ಟದ ನಡುವೆಯೂ ಖರೀದಿ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.

ನಾಗರ ಅಮವಾಸ್ಯೆಯಿಂದಲೇ ಶ್ರಾವಣ ಮಾಸದ ಹಬ್ಬಗಳ ಸಾಲು ಆರಂಭಗೊಳ್ಳುತ್ತದೆ. ಶನಿವಾರ ರೊಟ್ಟಿಪಂಚಮಿ, ಭಾನುವಾರ, ಸೋಮವಾರ ಹಾಲೆರೆಯುವ ಹಬ್ಬ, ಮಂಗಳವಾರ ಕೆರಕಟ್ಟಂಬಲಿ, ಶುಕ್ರವಾರ ವರಮಹಾಲಕ್ಷ್ಮೀ, ಬುಧವಾರ ನೂಲುಹುಣ್ಣಿಮೆ ಹೀಗೆ ಗಣೇಶ ಚತುರ್ಥಿ ವರೆಗೂ ಹಬ್ಬಗಳ ಸಂಭ್ರಮ ಮೇಳೈಸಲಿದೆ.

ಶನಿವಾರ ರೊಟ್ಟಿ ಪಂಚಮಿ ದಿನ ಎಳ್ಳು ಹಚ್ಚಿ ತಯಾರಿಸಿದ ಜೋಳ, ಸಜ್ಜೆ ರೊಟ್ಟಿ ಚಪಾತಿ, ಕಡ್ಲೆಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಕಡ್ಲೆ ಚಟ್ಟಿ ಶೇಂಗಾ ಚಟ್ನ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದ್ದರು. ಮನೆ ಮಂದಿಯೆಲ್ಲ ಸೇರಿ ಸವಿದರು. ಭಾನುವಾರ ನಾಗದೇವರಿಗೆ ಮಹಿಳೆಯರು, ಮಕ್ಕಳು ಹಾಲು ಹಾಕಿ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net