ವರಮಹಾಲಕ್ಷ್ಮೀ ಹಬ್ಬಕ್ಕೆ ಭರದ ಸಿದ್ಧತೆ

Untitled-2
Published on

ದೊಡ್ಡಬಳ್ಳಾಪುರ : ಶ್ರಾವಣ ಮಾಸದೊಂದಿಗೆ ಸಂಭ್ರಮದ ವಾತಾವಾರಣಕ್ಕೆ ವರಮಹಾಲ್ಮ ಹಬ್ಬ ಸಾಯಾಗುತ್ತಿದೆ. ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ ಸೇರಿ ಮನೆಗಳಲ್ಲಿಯೂ ವರಮಹಾಲ್ಮ ಪೂಜೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಹೂ, ಹಣ್ಣು, ತರಕಾರಿ ದರ ಗಗನಕ್ಕೇರಿದ್ದು, ಬೆಲೆ ಏರಿಕೆ ಮಧ್ಯೆಯೇ ಜನರು ಬುಧವಾರದಿಂದಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಮನೆಯಲ್ಲಿ ವರಮಹಾಲಕ್ಷಿ$್ಮಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆ ಉತ್ಸುಕರಾಗಿದ್ದು, ಖರೀದಿ ಜೋರಾಗಿದೆ. ವರಮಹಾಲಕ್ಷ್ಮೀ ಪೂಜೆ ಮಾಡಿದವರ ಧನ&ಧಾನ್ಯ&ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಮಹಾಲಕ್ಷ್ಮೀ ಮೂರ್ತಿಯನ್ನಿಟ್ಟು ಸೀರೆ, ತಾಳಿ, ಬಂಗಾರದ ಆಭರಣ, ಹಾಕಿ ವಿವಿಧ ಹೂಗಳಿಂದ ಅಲಂಕರಿಸುತ್ತಾರೆ. ನೈವೇದ್ಯ ಮಾಡಿ ಸಂಜೆ ಮುತೆದೆಯರಿಗೆ ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಡುವುದರ ಮೂಲಕ ಮುತೆದೆಯರಲ್ಲಿ ಲಕ್ಷ್ಮೀ ರೂಪ ಕಾಣುತ್ತಾರೆ.

ಅಗತ್ಯ ವಸ್ತುಗಳು ದುಬಾರಿ : ಶ್ರಾವಣದಲ್ಲಿ ಹೂ&ಹಣ್ಣುಗಳ ಬೆಲೆ ಹೆಚ್ಚಿದ್ದರೂ ಖರೀದಿ ಸಂಭ್ರಮ ಜೋರಾಗಿದೆ. ಹಣ್ಣುಗಳು, ವಿವಿಧ ಹೂವುಗಳಾದ ಕಾಕಡ, ಸೇವಂತಿಗೆ, ಗುಲಾಬಿ, ಲಕ್ಷಿ$್ಮಗೆ ಪ್ರಿಯವಾದ ತಾವರೆ ಹಾಗೂ ಬಾಳೆ ಕಂದು, ಮಾವಿನ ಎಲೆ ಸೇರಿ ಮೊದಲಾದ ಪೂಜಾ ಸಾಮಗ್ರಿಗಳಿಗೂ ಬೇಡಿಕೆ ಹೆಚ್ಚಿದೆ. ಈ ಬಾರಿ ಉತ್ತಮ ಮಳೆ ಇದ್ದರೂ, ಹೂ, ಹಣ್ಣುಗಳ ದರ ಗಗನಕ್ಕೇರಿದೆ. ಇದಲ್ಲದೆ ಬಾಳೆ ಕಂದು, ಅಕ್ಕಿ ಬೇಳೆ ಎಣ್ಣೆ ದರ ಹೆಚ್ಚಳವಾಗಿದೆ. ದುಬಾರಿ ಬೆಲೆ ನಡುವೆ ಹಬ್ಬದ ಖರೀದಿ ಭರದಿಂದಲ್ಲೇ ಸಾಗಿದೆ.

ದೇಗುಲಗಳಲ್ಲಿ ವಿಶೇಷ ಪೂಜೆ : ತಾಲೂಕಿನಾದ್ಯಂತ ವರಮಹಾಲಕ್ಷಿ$್ಮ ಹಬ್ಬಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಹಬ್ಬದ ಹಿನ್ನಲೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಲ್ಮ ದೇಗುಲ, ಹೊನ್ನಮ್ಮದೇಗುಲ, ದೊಡ್ಡಮ್ಮ ದೇಗುಲ, ಚೌಡೇಶ್ವರಿ, ಮುತ್ಯಾಲಮ್ಮ ದೇಗುಲ ಸೇರಿ ವಿವಿಧ ದೇಗುಲಗಳಲ್ಲಿ ದೇವಿಗೆ ವಿಶೇಷ ಪೂಜೆ, ಅಲಂಕಾರ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಬಾರಿ ಶ್ರಾವಣದಲ್ಲಿ ಹೂ, ಹಣ್ಣುಗಳ ದರ ಹೆಚ್ಚಳವಾಗಿದೆ. ಉತ್ತಮ ಮಳೆ ಇದ್ದರೂ ಪೂರೈಕೆ ಕುಸಿತವಾಗಿದ್ದು, ಹಬ್ಬದ ಖರೀದಿ ಜೋರಾಗಿದೆ. ದರ ಏರಿಕೆಗೆ ಗ್ರಾಹಕರು ಸಹಕರಿಸುತ್ತಿದ್ದಾರೆ. | ಮಹೇಶ್​ ಹೂ,ಹಣ್ಣು ಮಾರಾಟಗಾರ ದರ ಎಷ್ಟೇ ಏರಿಕೆ ಆದರೂ ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಸಾಧ್ಯವಾದಷ್ಟು ಜೋರಾಗಿ ಮಾಡಲಾಗುತ್ತದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದೇವೆ. | ಮಂಜುಳಾ ಗೃಹಿಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net