ಅಂತರ ರಾಜ್ಯ ವಿವಿಗಳ ಕಬಡ್ಡಿ ಪಂದ್ಯಾವಳಿಗೆ ಸಿದ್ಧತೆ

oplus_2
oplus_2
Published on

ರಾಮದುರ್ಗ: ಪಟ್ಟಣದ ಐ.ಎಸ್​.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ದಣ ಭಾರತದ ಅಂತರ ರಾಜ್ಯಗಳ ವಿಶ್ವವಿದ್ಯಾಲಯಗಳ ಪುರುಷರ ಕಬಡ್ಡಿ ಪಂದ್ಯಾವಳಿ ಅ.4ರಿಂದ 7ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ಐ.ಎಸ್​.ಯಾದವಾಡ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಹಾಗೂ ಪಾಂಡಿಚೇರಿ ರಾಜ್ಯಗಳ 131 ವಿಶ್ವ ವಿದ್ಯಾಲಯಗಳ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಕ್ರೀಡಾಪಟುಗಳಿಗೆ ರಾಮದುರ್ಗ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 13 ವಸತಿ ನಿಲಯದಲ್ಲಿ ವಸತಿ ಸೌಲಭ್ಯವಿದೆ. ಸುಸಜ್ಜಿತ 4 ಮ್ಯಾಟ್​ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಸುಮಾರು 8,000 ಸಾವಿರ ಜನರಿಗೆ ಕುಳಿತುಕೊಳ್ಳಲು ಗ್ಯಾಲರಿ ಮಾಡಲಾಗುತ್ತಿದೆ. ಒಟ್ಟು 2,100 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಸಿ.ಡಿ.ಸಿ. ಸದಸ್ಯರು ಹಾಗೂ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲರೂ ಸುಸಜ್ಜಿತ ಪಂದ್ಯ ಸಂಟನೆ ಮಾಡಬೇಕು ಎಂದು ಸೂಚನೆ ನೀಡಿದರು.

ಪ್ರಾಚಾರ್ಯ ಎಂ.ಡಿ.ಕಮತಗಿ, ಸಿಡಿಸಿ ಪದಾಧಿಕಾರಿಗಳಾದ ಜಿ.ಬಿ.ರಂಗನಗೌಡ್ರ, ಪ್ರೊ.ಎಸ್​.ಎಸ್​.ಕೊಡತೆ, ಎಸ್​.ಜಿ. ಚಿಕ್ಕನರಗುಂದ, ಎಂ.ಡಿ.ಸಾರವಾನ, ಜಹೂರ್​ ಹಾಜಿ, ನಂದಕುಮಾರ ಸುರೇಬಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net