ದೊಡ್ಡಬಳ್ಳಾಪುರ ಮತಗಟ್ಟೆಗಳ ಮರುವಿಂಗಡಣೆಗಾಗಿ ಸಿದ್ಧತೆ

FotoJet (3)
Published on

ಚುನಾವಣಾಧಿಕಾರಿ ನೇತೃತ್ವದಲ್ಲಿ ರಾಜಕೀಯ ಮುಖಂಡರ ಸಭೆ

 ದೊಡ್ಡಬಳ್ಳಾಪುರ: ಪ್ರಸಕ್ತ ಸಾಲಿನ ಮತಗಟ್ಟೆಗಳ ಮರುವಿಂಗಡಣೆಗಾಗಿ ನಗರದ ಉಪವಿಭಾಗಾಧಿಕಾರಿ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಚುನಾವಣಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಾದ ದುರ್ಗಶ್ರೀ ನೇತೃತ್ವದಲ್ಲಿ ಬುಧವಾರ ತಾಲೂಕಿನ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ರಾಜಸ್ವನಿರೀಕ್ಷಕರ ಸಭೆ ನಡೆಯಿತು.

ಉಪವಿಭಾಗಾಧಿಕಾರಿ ದುರ್ಗಾಶ್ರೀ ಮಾತನಾಡಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ 276 ಕಾಯಂ ಮತಗಟ್ಟೆಗಳಿವೆ. ಇದರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿ 1200ಕ್ಕೂ ಹೆಚ್ಚು ಮತದಾರರನ್ನು ಮೀರಿದ ಮತಗಟ್ಟೆಗಳನ್ನು ಗುರುತಿಸಿ ನಿಯಾಮಾನುಸಾರ ಮತಗಟ್ಟೆಗಳ ಮರುವಿಂಗಡಣೆ ಮಾಡಲಾಗುವುದು ಎಂದರು.

ಗ್ರಾಮಾಂತರದಲ್ಲಿ ಒಟ್ಟು-6 ಮತಗಟ್ಟೆಗಳು ಮತ್ತು ನಗರ ಪ್ರದೇಶದಲ್ಲಿ 10 ಮತಗಟ್ಟೆಗಳ ವಿಂಗಡಣೆಗೆ ಗುರುತಿಸಲಾಗಿದೆ. ಹೊಸ ಮತಗಟ್ಟೆ ಸ್ಥಾಪನೆಗೆ ಅನುಕೂಲವಾಗುವಂತಹ ಸೂಕ್ತವಾದ ಸರ್ಕಾರಿ ಕಟ್ಟಡಗಳನ್ನು ಪರಿಶೀಲಿಸಿ ಮತಗಟ್ಟೆಯನ್ನ ಸ್ಥಾಪಿಸಲಾಗುವುದು. ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಾದ, ನೀರು, ವಿದ್ಯುತ್, ಶೌಚಾಲಯ, ರಾಂಪ್ ವ್ಯವಸ್ಥೆ, ದೂರವಾಣಿ ಹಾಗೂ ಇತರ ವ್ಯವಸ್ಥೆಗಳನ್ನ ಮಾಡಲಾಗುವುದು ಎಂದರು.

ನಿಯಮಾನುಸಾರ ನೇಮಕ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒ ಮತ್ತು ಬಿಎಲ್‌ಒ ಮೇಲ್ವಿಚಾರಕರನ್ನು ನೇಮಕ ಮಾಡುವುದು ಹಾಗೂ ಬಿಎಲ್‌ಒ ಅವರನ್ನು ನೇಮಕ ಮಾಡುವಾಗ ಆಯೋಗದ ನಿರ್ದೇಶನದಂತೆ ಆಯಾ ಮತಗಟ್ಟೆಯಲ್ಲಿ ಬಿ.ಎಲ್.ಒ. ಅವರು ಮತದಾರರಾಗಿ ಇರುವುದನ್ನು ಖಚಿತಪಡಿಸಿಕೊಂಡು

ನೇಮಕ ಮಾಡಲಾದ ಬಿ.ಎಲ್.ಒ. ಮತ್ತು ಬಿ.ಎಲ್.ಒ. ಮೇಲ್ವಿಚಾರಕರಿಗೆ ಹೋಬಳಿವಾರು ತರಬೇತಿಯನ್ನು ನೀಡಲಾಗುವುದು ಎಂದು ಚುನಾವಣಾಧಿಕಾರಿ ದುರ್ಗಾಶ್ರೀ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net