

ಶಿರಸಿ: ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಬನವಾಸಿ ಮಧುಕೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಗಾಗಿ ತಯಾರಿ ನಡೆದಿದ್ದು, 26ರಂದು ಶ್ರೀ ದೇವರ ಗರ್ಭ ಗುಡಿ ಪ್ರವೇಶಿಸಲು ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ರಮೇಶ ಹೆಗಡೆ ತಿಳಿಸಿದ್ದಾರೆ. ದೇವರ ದರ್ಶನಕ್ಕೆ ಸನಾತನ ಉಡುಪಿನಲ್ಲಿ ಬರುವುದು ಕಡ್ಡಾಯ. ಪುರುಷರು ಪಂಚೆ ಮತ್ತು ಶಲ್ಯ ಧರಿಸಿ ಬರಬೇಕು, ಸ್ತ್ರೀಯರು ಸೀರೆ ಅಥವಾ ಚೂಡಿದಾರ ಧರಿಸಿ ಬರಬಹುದು. ಸ್ವಯಂಸೇವಕರಾಗಿ ಸೇವೆ ಸಲ್ಲಿಸುವವರು ಶ್ರೀ ದೇವಸ್ಥಾನ ಕಾರ್ಯಾಲಯ ಸಂಪರ್ಕ ಮಾಡಬಹುದು. ಭಜನೆ ಮಾಡುವವರಿಗೆ ಮುಕ್ತ ಅವಕಾಶವಿದೆ ಎಂದು ರಮೇಶ ಹೆಗಡೆ ತಿಳಿಸಿದ್ದಾರೆ.