ಜಾಲಾರಿ ಗಂಗಮಾಂಭ ದೇಗುಲದ ಧರ್ಮರಾಯ ಹೂವಿನ ಕರಗ ಮಹೋತ್ಸವಕ್ಕೆ ಸಿದ್ಧತೆ

IMG-20250413-WA0064.jpg
Published on

ಚಿಕ್ಕಬಳ್ಳಾಪುರ: ನಗರದ ಜಾಲಾರಿ ಗಂಗಮಾಂಭ ದೇವಾಲಯದ ಧರ್ಮರಾಯ ಸೇವಾ ಸಮಿತಿಯು ಸಂಪ್ರದಾಯ ಬದ್ಧ ವಿವಿಧ ಕಾರ್ಯಕ್ರಮಗಳೊಂದಿಗೆ ಏ.19 ರಂದು 63 ನೇ ವರ್ಷದ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಕೈಗೊಂಡಿದೆ.
ಏ.14, ಏ.15 ರಂದು ಗಂಗಮಾಂಭ ದೇವಾಲಯ ಮುಂಭಾಗ ಹೋಮ ಹವನ, 16 ರಂದು ಕಳಸ ಪ್ರತಿಷ್ಠಾಪನೆ, 17 ರಂದು ಹಸಿ ಕರಗ, 18 ರಂದು ಗಂಗಮ್ಮ ಜಾತ್ರೆ, ಏ.19 ರಂದು ಧರ್ಮರಾಯ ಹೂವಿನ ಕರಗ ಮಹೋತ್ಸವ, ದ್ರೌಪತಮ್ಮನವರ ಕಲ್ಯಾಣೋತ್ಸವ, ಏ.21 ರಂದು ವಸಂತೋತ್ಸವ ಸೇರಿ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ.
ಪ್ರತಿ ವರ್ಷದಂತೆ ನಾಡಹಬ್ಬ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ವಾದ್ಯ ಗೋಷ್ಠಿ, ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಹಸಿ ಕರಗ, ಗಂಗಮ್ಮನ ಗುಡಿಯಲ್ಲಿ ಹೂವಿನ ಕರಗ, ಭುವನೇಶ್ವರಿ ವೃತ್ತದಲ್ಲಿ ಒನಕೆ ಕರಗದ ಮೆರವಣಿಗೆ ಪ್ರಾರಂಭವಾಗಲಿದೆ. ಪೂಜಾರಿ ಮೇಲೂರು ಕೆ.ಧರ್ಮೇಂದ್ರ ಹೂವಿನ ಕರಗವನ್ನು ಹೊರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ದೇವಾಲಯ ಸಮಿತಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net