ಜಿಲ್ಲೆಯಲ್ಲಿ ಗಣೇಶ ಹಬ್ಬಕ್ಕೆ ಭರದ ಸಿದ್ಧತೆ

udp-17-ganesha 3A
Published on

ಉಡುಪಿ: ಜಿಲ್ಲೆಯಾದ್ಯಂತ ಸೆ.19ರಂದು ನಡೆಯುವ ಗಣೇಶ ಚತುರ್ಥಿಗೆ ಭರದ ಸಿದ್ಧತೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 463 ಪೆಂಡಲ್​ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಪೊಲೀಸ್​ ಇಲಾಖೆ ಅನುಮತಿ ನೀಡಿದೆ.

3 ಕೆಎಸ್​ಆರ್​ಪಿಗಳು ಮತ್ತು 8 ಡಿಎಆರ್​ ಸೇರಿದಂತೆ ಸುಮಾರು 900 ಪೊಲೀಸರನ್ನು ನಿಯೋಜಿಸಲಾಗಿದ್ದು, ಸಾಕಷ್ಟು ಬಂದೋಬಸ್ತ್​ ಮಾಡಲಾಗಿದೆ. ರಾತ್ರಿ 10 ಗಂಟೆಯ ನಂತರ ಧ್ವನಿ ವ್ಯವಸ್ಥೆಗಳನ್ನು ಬಳಸುವಂತಿಲ್ಲ.

ಪೆಂಡಾಲು ನಿರ್ಮಾಣ, ಸ್ವಾಗತ ಕಮಾನು ರಚನೆ, ಆಮಂತ್ರಣ ಹಂಚಿಕೆಗಾಗಿ ಕಾರ್ಯಕರ್ತರು ಶ್ರಮವಹಿಸುತ್ತಿದ್ದು, ಪ್ರಮುಖ ಗಣೇಶೋತ್ಸವ ಸಮಿತಿಗಳಾದ ಕೊಡವೂರು ಗಣೇಶೋತ್ಸವ ಸಮಿತಿ 55ನೇ ವರ್ಷದ ಹಬ್ಬ, ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ 57ನೇ ವರ್ಷ, ಪರ್ಕಳ ಸಾರ್ವಜನಿಕ ಗಣೇಶೋತ್ಸವ 56ನೇ ವರ್ಷ, ಬಾರ್ಕೂರು ಪಟ್ಟಾಭಿರಾಮ ದೇವಳದ 56ನೇ ವರ್ಷದ ಗಣಪತಿ, ಅಂಬಲಪಾಡಿ ಗಣೇಶೋತ್ಸವ ಸಮಿತಿ, ಮಣಿಪಾಲ ಸಿಂಡಿಕೇಟ್​ ಬ್ಯಾಂಕ್​ ಗೋಲ್ಡನ್​ ಜ್ಯುಬಿಲಿ ಹಾಲ್​, ಪಡುಬಿದ್ರಿ, ಅಂಬಾಗಿಲು, ಕಾರ್ಕಳ, ಗೋಳಿಅಂಗಡಿ, ಕುಂದಾಪುರ, ಸೋಮೇಶ್ವರ ಸೇರಿದಂತೆ ಎಲ್ಲೆಡೆ ಗಣೇಶೋತ್ಸವಕ್ಕೆ ತಯಾರಿ ನಡೆಯುತ್ತಿದೆ.

*ಪರಿಸರ ಸ್ನೇಹಿ ಗಣಪನಿಗೆ ಬೇಡಿಕೆ
ಗಣೇಶನ ವಿಗ್ರಹ ತಯಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ವಿಗ್ರಹ ರಚನಾಕಾರರು ಮೂರ್ತಿಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರ್ತಿ ತಯಾರಕರಿಗೆ ಒಂದು ತಿಂಗಳ ಹಿಂದೆಯೇ ಬೇಡಿಕೆಗಳು ಸಲ್ಲಿಕೆಯಾಗಿದ್ದು, ಕುಂದಾಪುರ, ಬಂಟ್ವಾಳ ಮೊದಲಾದ ಕಡೆ ಹೆಂಚಿನ ಫ್ಯಾಕ್ಟರಿಗಳಿಂದ ಆವೆ ಮಣ್ಣು ತಂದು ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 2&3 ವರ್ಷಗಳಿಂದ ಪರಿಸರ ಸ್ನೇಹಿ ಬಣ್ಣ ರಹಿತ ಗಣಪತಿಗೂ ಬೇಡಿಕೆ ಹೆಚ್ಚಾಗಿದೆ. ಜಿಲ್ಲಾಡಳಿತ ವಿಶೇಷವಾಗಿ ಪಿಒಪಿ ಗಣಪ ಬಳಕೆ ನಿಷೇಧಿಸಿದ್ದು, ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ವತ@ ಗಣೇಶನ ವಿಗ್ರಹ ತಯಾರಿಕಾ ಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

*ಕಬ್ಬಿಗೆ 80 ರೂ.
ಚೌತಿ ಹಿನ್ನೆಲೆಯಲ್ಲಿ ನಗರದಲ್ಲಿ ಖರೀದಿ ಭರಾಟೆಯೂ ಜೋರಾಗಿ ನಡೆದಿದೆ. ಸಾರ್ವಜನಿಕರು ಗಣೇಶನಿಗೆ ಸಮರ್ಪಣೆ ಮಾಡಲು ಉಂಡೆ, ಚಕ್ಕುಲಿ ಹಿಟ್ಟುಗಳು, ಲಡ್ಡು, ಹೂ, ಹಣ್ಣು ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿನ ಬೆಲೆ ತುಸು ಏರಿಕೆಯಾಗಿದೆ. ಕಳೆದ ವರ್ಷ 60 ರೂ. ಇದ್ದ 1 ಕೋಲು ಕಬ್ಬಿನ ಬೆಲೆ ಈ ಬಾರಿ 80 ರೂ.ಗೆ ಮಾರಾಟವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net