ಖಾದ್ರಿ ಬಾಬಾ ಉರುಸ್‌ಗೆ ಸಿದ್ಧತೆ

Yapaladinni Darga
Published on

ರಾಯಚೂರು: ಯಾಪಲದಿನ್ನಿ ಗ್ರಾಮದಲ್ಲಿರುವ ಸೈಯದ್ ಇಸ್ಲಾಂ ವಲಿ ಖಾದ್ರಿ ಬಾಬಾ ಹಾಗೂ ಸೈಯದ್ ಷಾ ಇಸ್ಮಾಯಿಲ್ ಖಾದ್ರಿ ದರ್ಗಾದಲ್ಲಿ ಫೆ.22ರಿಂದ 24ರವರೆಗೆ ಉರುಸ್ ನಡೆಯಲಿದ್ದು, ಸಿದ್ಧತೆ ಕೈಗೊಳ್ಳಲಾಗಿದೆ. ರಾಜ್ಯದ ನಾನಾ ಜಿಲ್ಲೆಗಳು, ಆಂಧ್ರ ಮತ್ತು ತೆಲಂಗಾಣದ ಜನರು ಉರುಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.22ರಂದು ಸಂಜೆ 7ಕ್ಕೆ ಗಂಧ ಕಾರ್ಯಕ್ರಮ ನಡೆಯಲಿದ್ದು, ಸೈಯದ್ ಜಮಾಲುದ್ದೀನ್ ಖಾದ್ರಿ ಮನೆಯಿಂದ ಗ್ರಾಮದ ಬೀದಿಗಳ ಮೂಲಕ ದರ್ಗಾಗೆ ಗಂಧವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಫೆ.23ರಂದು ಉರುಸ್ ಮತ್ತು ಫೆ.24ರಂದು ಜಿಯಾರತ್ ನಡೆಯಲಿದೆ ಎಂದು ದರ್ಗಾ ಆಡಳಿತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net