

ಕೊಕ್ಕರ್ಣೆ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಇತ್ತೀಚೆಗೆ ನಡೆಸಿದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಭೇಟಿ ನೀಡಿದ ಕುಡುಬಿ ಕುಟುಂಬದವರ ಕಜ್ಕೆ ಸಿದ್ಧನಾಯ್ಕನ ಮನೆ ಭೇಟಿ ನೀಡಿ ಜಮೀನು ಪತ್ರ ಸಮಸ್ಯೆ ಪರಿಹಾರ ನೀಡಿದ್ದು, ಈಗ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೋರಯ್ಯ ನೇತೃತ್ವದಲ್ಲಿ ಕಜ್ಕೆ ಸಿದ್ಧನಾಯ್ಕರಮನೆಯ ಮೋಹನ ನಾಯ್ಕ, ಸಿದ್ಧ ನಾಯ್ಕ, ಸಾಂತ ನಾಯ್ಕ, ಉತ್ತರ ನಾಯ್ಕ, ಬೆಳ್ಳ ನಾಯ್ಕ ಈ ಕುಟುಂಬದವರ ವಂಶ ವೃಕ್ಷ ತಯಾರಿ ಕಾರ್ಯಕ್ರಮ ಸೋಮವಾರ ನಡೆಯಿತು.
ಗ್ರಾಮಕರಣಿಕ ರಾಘವೇಂದ್ರ, ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ನಾಲ್ಕೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಭಾಕರ ಎ.,ನಾಲ್ಕೂರು ಗ್ರಾಪಂ ಸದಸ್ಯರಾದ ಸಂತೋಷ್ ಹೆಗ್ಡೆ ಮಾರಾಳಿ, ಎನ್.ಕರುಣಾಕರ ಶೆಟ್ಟಿ ಕಜ್ಕೆ, ಬೆಳ್ಳ ನಾಯ್ಕ, ಗ್ರಾಮಸ್ಥರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಸಿದ್ಧನಾಯ್ಕರಮನೆ 228ಯ ದೊಡ್ಡ ಕುಟುಂಬವಾಗಿದೆ. ಇವರ ಜಮೀನಿನ ಕಂದಾಯ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ.